ಸಾರಾಂಶ
ಸಮಸ್ಯೆ ಪರಿಹರಿಸಿಕೊಂಡು ಒಂದಾದ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು. ನ್ಯಾಯಾಧೀಶರು ಒಂದಾದ ಜೋಡಿಗಳಿಗೆ ಪುಷ್ಪ ಹಾಕುವ ಮೂಲಕ ಒಂದಾಗಿ ಬಾಳುವಂತೆ ಹಾರೈಸಿದರು.
ಕುಷ್ಟಗಿ:
ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಾರಣಗಳಿಂದ ಮೂರ್ನಾಲ್ಕು ವರ್ಷಗಳಿಂದ ದೂರವಾಗಿದ್ದ ಎರಡು ವಿವಾಹಿತ ಜೋಡಿಗಳು ರಾಜೀ ಸಂಧಾನದ ಮೂಲಕ ಒಂದಾಗಿದ್ದಾರೆ.ಸಮಸ್ಯೆ ಪರಿಹರಿಸಿಕೊಂಡು ಒಂದಾದ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು. ನ್ಯಾಯಾಧೀಶರು ಒಂದಾದ ಜೋಡಿಗಳಿಗೆ ಪುಷ್ಪ ಹಾಕುವ ಮೂಲಕ ಒಂದಾಗಿ ಬಾಳುವಂತೆ ಹಾರೈಸಿದರು.ತಿಳಿವಳಿಕೆ ನೀಡಿದ ನ್ಯಾಯಾಧೀಶರು:
ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಸೇರಿದಂತೆ ಇತರೆ ನ್ಯಾಯಾಧೀಶರು ಹಾಗೂ ದಾವೆ ಹೂಡಿದ ವಕೀಲರು, ಕುಟುಂಬದಲ್ಲಿ ಸಣ್ಣ-ಪುಟ್ಟ ಜಗಳಗಳು ಬರುವುದು ಸಹಜ. ಗಂಡ-ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಮಕ್ಕಳ ಅಭಿವೃದ್ಧಿ ಸಲುವಾಗಿ ಇಬ್ಬರು ಪರಸ್ಪರವಾಗಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ತಿಳಿವಳಿಕೆ ನೀಡಿದರು.ಮಲ್ಲಪ್ಪ ಶಿರಗುಂಪಿ ಹಾಗೂ ಹುಲಿಗೆಮ್ಮ ನಾಯಕ, ಸತೀಶ ಮತ್ತು ಶರಣಮ್ಮ ದಂಪತಿ ಒಂದಾದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ನಿಂಗಪ್ಪ ಸುದ್ದಿ, ಪಂಚಾಕ್ಷರಿ ಹುನಗುಂದ, ಎಂ.ಎಸ್. ಹೇರೂರು, ಬಿ.ಡಿ. ಅಪ್ಪೋಜಿ, ಸುಶೀಲಾ ಮಂಗಳೂರು ಸೇರಿದಂತೆ ಅನೇಕ ವಕೀಲರು ಹಾಜರಿದ್ದರು.