ಸಾರಾಂಶ
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚರ್ ವಾಹನವೊಂದು ಹರಿದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾದ ಘಟನೆ ಶನಿವಾರ ರಾತ್ರಿ ಜರುಗಿದೆ.
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚರ್ ವಾಹನವೊಂದು ಹರಿದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾದ ಘಟನೆ ಶನಿವಾರ ರಾತ್ರಿ ಜರುಗಿದೆ.
ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಬಸವಣ್ಣನವರ ಮಗ ಅಭಿಷೇಕ್ (೨೨) ಮತ್ತು ಸಿದ್ದರಾಜು ಅವರ ಮಗ ಅಭಿಷೇಕ್ (೨೫) ಸ್ಥಳದಲ್ಲೇ ಸಾವನ್ನಪ್ಪಿದ್ದು , ಮಾದೇಶ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ.ಅಭಿಷೇಕ್, ಮಾದೇಶ, ಅಭಿಷೇಕ್ ಮೂವರು ಬೈಕ್‌ನಲ್ಲಿ ವೆಂಕಟಯ್ಯನ ಛತ್ರದ ಕಡೆಯಿಂದ ಬ್ಯಾಡಮೂಡ್ಲು ಗ್ರಾಮಕ್ಕೆ ಹೋಗಲು ಬರುತ್ತಿದ್ದಾಗ ಹರದನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಆಯತಪ್ಪಿ ಬಿದ್ದಿದ್ದಾರೆ, ಮೂವರು ರಸ್ತೆಗೆ ಬಿದ್ದರೆ, ಬೈಕ್ ರಸ್ತೆ ಬದಿಗೆ ಬಿದ್ದಿದೆ, ಹಿಂದಿನಿಂದ ಬರುತ್ತಿದ್ದ ಈಚರ್ ವಾಹನ ಮೂವರ ಮೇಲೆ ಹರಿದಿದೆ, ಅದರಲ್ಲಿ ಅಭಿಷೇಕ್ (೨೨) ಮತ್ತು ಅಭಿಷೇಕ್ (೨೫) ಸ್ಥಳದಲ್ಲೇ ಮೃತಪಟ್ಟರೆ, ಮಾದೇಶನಿಗೂ ತಲೆಗೆ ತೀವ್ರ ಪೆಟ್ಟಾಗಿದೆ.
ವಿಷಯ ತಿಳಿದ ತಕ್ಷಣ ಸಂಚಾರಿ ಪೊಲೀಸರು ಸ್ಥಳಕ್ಕೆ ಅಗಮಿಸಿ, ಮಾದೇಶನನ್ನು ಆಸ್ಪತ್ರೆಗೆ ದಾಖಲಿಸಿದರು.ಈಚರ್ ವಾಹನದ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ, ಭಾನುವಾರ ಬೆಳಗ್ಗೆ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ, ವಾಹನವನ್ನು ವಶಪಡಿಸಿಕೊಂಡು, ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೂವರು ಯುವಕರು ಕೂಲಿ ಕಾರ್ಮಿಕರಾಗಿದ್ದಾರೆ.