ಸಾರಾಂಶ
ಜಾನುವಾರುಗಳು, ಮೇಕೆ, ಕುರಿಗಳನ್ನು ಮೇಯಿಸಲು ಕಾಡಿನತ್ತ ಓಣಿಯೊಂದರಲ್ಲಿ ತೆರಳುತ್ತಿದ್ದ ಇಬ್ಬರು ರೈತರು ಕಾಡಾನೆಯೊಂದರ ದಾಳಿಯಿಂದ ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜಾನುವಾರುಗಳು, ಮೇಕೆ, ಕುರಿಗಳನ್ನು ಮೇಯಿಸಲು ಕಾಡಿನತ್ತ ಓಣಿಯೊಂದರಲ್ಲಿ ತೆರಳುತ್ತಿದ್ದ ಇಬ್ಬರು ರೈತರು ಕಾಡಾನೆಯೊಂದರ ದಾಳಿಯಿಂದ ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ತಾಲೂಕಿನ ಆಲತ್ತೂರು ಗ್ರಾಮದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.ಗ್ರಾಮದ ರೈತರಾದ ಚುಂಚೇಗೌಡ, ದೊಡ್ಡಕಿಟ್ಟೇಗೌಡ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಜಾನುವಾರು, ಮೇಕೆ, ಕುರಿಗಳೊಂದಿಗೆ ಆಲತ್ತೂರಿಂದ ಚಿಕ್ಕ ಓಣಿಯಲ್ಲಿ ತೆರಳುತ್ತಿದ್ದಾಗ ದಿಢೀರ್‌ನೆ ಕಾಡಾನೆ ಓಣಿಗೆ ಬಂದಿದೆ. ಈ ವೇಳೆ ದನ, ಕರುಗಳು, ಮೇಕೆ, ಕುರಿಗಳು ಬೆದರಿದಾಗ ರೈತರಾದ ಚುಂಚೇಗೌಡ, ದೊಡ್ಡಕಿಟ್ಟೇಗೌಡ ನೋಡ ನೋಡುತ್ತಿದ್ದಂತೆಯೇ ಕಾಡಾನೆ ಓಣಿಯೊಳಕ್ಕೆ ಬಂದಿದೆ. ಈ ವೇಳೆಗೆ ಟ್ರ್ಯಾಕ್ಟರ್ ಬಂದ ಸದ್ದಿಗೆ ಕಾಡಾನೆ ಜಮೀನಿತ್ತ ಓಡಿ ಹೋಗಿದೆ ಎಂದು ರೈತರು ಹೇಳಿದ್ದಾರೆ.ಟ್ರ್ಯಾಕ್ಟರ್ ಸದ್ದು, ಟ್ರ್ಯಾಕ್ಟರ್ ಹಾರನ್, ರೈತರು ಹಾಗೂ ಟ್ರ್ಯಾಕ್ಟರ್ ಚಾಲಕ ಕೂಗಿ ಕೊಂಡಾಗ ಆನೆ ಓಣಿಯಿಂದ ಜಮೀನಿಗೆ ಹೋಯಿತು ಎಂದು ಗ್ರಾಮದ ಟಿ.ಶಾಂತೇಶ್ ಹೇಳಿದ್ದಾರೆ.ಜೀವ ಉಳೀತು:ಕಾಡಾನೆ ದಿಢೀರ್ ಓಣಿಗೆ ಬಂದ ಸಮಯದಲ್ಲಿ ಟ್ರ್ಯಾಕ್ಟರ್ ಸದ್ದಿನಿಂದಾಗಿ ರೈತರಿಬ್ಬರ ಜೀವ ಉಳಿದಿದೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗೆ ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮದ ರೈತರು ದೂರಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಆಲತ್ತೂರು ಸುತ್ತ ಮುತ್ತ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತರ ಫಸಲನ್ನು ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಮುಂದಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.