ರಾಮನಗರ: ನೇಪಾಳದ ಕಠ್ಮಂಡುವಿನಲ್ಲಿ ನವೆಂಬರ್ 20 ರಿಂದ 25 ನಡೆದ 8ನೇ ದಕ್ಷಿಣ ಏಷ್ಯಾ ಐಟಿಎಫ್ ಟೇಕ್ವಾಂಡೋ ಚಾಂಪಿಯನ್ ಶಿಪ್–2026 ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಮನಗರದ ಶಾನ್ವಿ ಸತೀಶ್ ರವರು 2 ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ
ರಾಮನಗರ: ನೇಪಾಳದ ಕಠ್ಮಂಡುವಿನಲ್ಲಿ ನವೆಂಬರ್ 20 ರಿಂದ 25 ನಡೆದ 8ನೇ ದಕ್ಷಿಣ ಏಷ್ಯಾ ಐಟಿಎಫ್ ಟೇಕ್ವಾಂಡೋ ಚಾಂಪಿಯನ್ ಶಿಪ್–2026 ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಮನಗರದ ಶಾನ್ವಿ ಸತೀಶ್ ರವರು 2 ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾರತ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಭೂತಾನ್ , ಮಾಲ್ಡೀವ್ಸ್ ದೇಶಗಳಿಂದ ಸುಮಾರು 900 ಆಟಗಾರರು ಪಾಲ್ಗೊಂಡಿದ್ದರು. 10 ವರ್ಷ ವಯೋಮಾನದ 26 ರಿಂದ 34 ಕೆಜಿ ತೂಕದ ಪ್ಯಾಟರ್ಸ್ ಮತ್ತು ಸ್ಪೇರಿಂಗ್ ನಲ್ಲಿ ಶಾನ್ವಿ ಸತೀಶ್ 2 ಚಿನ್ನದ ಪದಕ ಪಡೆದಿದ್ದಾಳೆ.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸತೀಶ್ ರವರ ಪುತ್ರಿಯಾದ ಶಾನ್ವಿರವರು ಈ ಹಿಂದೆ ದುಬೈ ಮತ್ತು ಮಲೇಶಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಪಡೆದಿದ್ದರು. ಈಕೆ ಬಾಲರಾಜನ್ , ಪ್ರದೀಪ್ , ಜನಾರ್ದನ ತರಬೇತಿ ಪಡೆಯುತ್ತಿದ್ದಾಳೆ.
ಈ ಸಾಧನೆ ರಾಮನಗರ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ. ಶಾನ್ವಿ ಸತೀಶ್ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ನಾಡಿಗೆ ಕೀರ್ತಿ ತರಲಿ ಎಂದು ಶಾಸಕ ಇಕ್ಬಾಲ್ ಹುಸೇನ್ ಶುಭ ಹಾರೈಸಿದ್ದಾರೆ.----------------------
24ಕೆಆರ್ ಎಂಎನ್ 7.ಜೆಪಿಜಿನೇಪಾಳದ ಕಠ್ಮಂಡುವಿನಲ್ಲಿ ನಡೆದ 8ನೇ ದಕ್ಷಿಣ ಏಷ್ಯಾ ಐಟಿಎಫ್ ಟೇಕ್ವಾಂಡೋ ಚಾಂಪಿಯನ್ ಶಿಪ್–2026 ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಮನಗರದ ಶಾನ್ವಿ ಸತೀಶ್ ರವರು 2 ಚಿನ್ನದ ಪದಕ ಪಡೆದಿರುವುದು.
----------------------