ಸಾರಾಂಶ
ಗುಬ್ಬಿ: ಹಾಡಹಗಲೇ ಕಾರಿನ ಕಿಟಕಿ ಒಡೆದು ಕಾರಿನಲ್ಲಿದ್ದ 15 ಲಕ್ಷ ದೋಚಿದ್ದ ಕಳ್ಳರನ್ನು ಗುಬ್ಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಬ್ಬಿ: ಹಾಡಹಗಲೇ ಕಾರಿನ ಕಿಟಕಿ ಒಡೆದು ಕಾರಿನಲ್ಲಿದ್ದ 15 ಲಕ್ಷ ದೋಚಿದ್ದ ಕಳ್ಳರನ್ನು ಗುಬ್ಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಿವಿಧ ಪ್ರಕರಣಗಳು ಸೇರಿ ಒಟ್ಟು 16 ಲಕ್ಷ ರು. ಮೌಲ್ಯದ ನಗದು ಹಾಗೂ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಆಂಧ್ರ ಮೂಲದ ಶಿವ(44) ಹಾಗೂ ಸುಬ್ರಹ್ಮಣ್ಯ ಅಲಿಯಾಸ್ ಮಣಿ (38) ಎಂದು ಗುರುತಿಸಲಾಗಿದೆ. ಈ ಆರೋಪಿತರು ಅಂತರ್ ಜಿಲ್ಲಾ ರಾಜ್ಯ ಅಪರಾಧಿಗಳಾಗಿದ್ದು ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಗುಬ್ಬಿಯಲ್ಲಿ ಒಂದು ಪ್ರಕರಣ , ಸಿರಾ ದಲ್ಲಿ ಎರಡು ಪ್ರಕರಣ, ಚಿಕ್ಕನಾಯಕನಹಳ್ಳಿಯಲ್ಲಿ ಒಂದು ಪ್ರಕರಣ, ನೊಣವಿನಕೆರೆ ವ್ಯಾಪ್ತಿಯಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಿರಾ ಉಪ ವಿಭಾಗದ ಡಿವೈಎಸ್ಪಿ ಶೇಖರ್ ಮಾರ್ಗಸೂಚನೆ ಮೇರೆಗೆ ಗುಬ್ಬಿ ವೃತ್ತ ನಿರೀಕ್ಷಕರಾದ ರಾಘವೇಂದ್ರ ಅವರ ನೇತೃತ್ವದಲ್ಲಿ ಸಬ್ ಇನ್ಸಪೆಕ್ಟರ್ ಸುನಿಲ್ ಕುಮಾರ್ ಸೇರಿದಂತೆ ಸಿಬ್ಬಂದಿ ಇದ್ದರು.