ಸಾರಾಂಶ
ಕನಕಪುರ: ಹಾಡಹಗಲೇ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಅಂತಾರಾಜ್ಯ ಕಳ್ಳನನ್ನು ಗ್ರಾಮ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರು ತಾಲೂಕಿನ ವಡವಟ್ಟು ಗ್ರಾಮದ ಶಕ್ತಿವೇಲು(32) ಹಾಗೂ ಶಶಿಕುಮಾರ್ 45) ಬಂಧಿತ ಆರೋಪಿಗಳು. ಶಕ್ತಿವೇಲು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದನು. ತಾಲೂಕಿನ ಕೋಡಿಹಳ್ಳಿ ಹೋಬಳಿ ಚಿಕ್ಕಮಕ್ಕೋಡ್ಲು ಗ್ರಾಮದ ಚಿಕ್ಕಣ್ಣ ಮನೆಯಲ್ಲಿ ಅ.18ರಂದು ಮನೆ ಬೀಗ ಮುರಿದು ಬೀರುವಿನಲ್ಲಿದ್ದ 3.5 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಅಪಹರಿಸಿದ್ದರು. ಎಸ್ಪಿ ಕಾರ್ತಿಕ್ ರೆಡ್ಡಿ ಎಎಸ್ಪಿ ಪ್ರಕಾಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕೆ.ಎಲ್.ಕೃಷ್ಣ, ಕೋಡಿಹಳ್ಳಿ ಠಾಣಾ ಪಿಎಸ್ಐ ರವಿಕುಮಾರ್ ಹಾಗೂ ಸಿಬ್ಬಂದಿ ತಮಿಳುನಾಡಿನ ತಿರುಪ್ಪೂರು ತಾಲೂಕಿನ ವಡವಟ್ಟು ಗ್ರಾಮದಲ್ಲಿ ಶಕ್ತಿ ವೇಲುನನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ 68 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿ ಶಕ್ತಿವೇಲುವಿನಿಂದ ಕಳವು ಹಣ ಪಡೆದು ಖರ್ಚು ಮಾಡಿಕೊಂಡಿದ್ದ ಆತನ ಅಕ್ಕನ ಗಂಡ ಶಶಿಕುಮಾರ್ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತನಿಖಾಧಿಕಾರಿ ಕೆ ಎಲ್ ಕೃಷ್ಣ, ಪಿಎಸ್ಐ ರವಿಕುಮಾರ್, ಎಎಸ್ಐ ಕಲ್ಯಾಣಕುಮಾರ್, ಪಿಎಸ್‌ಐ ಗಿರೀಶ್, ಮೋಹನ, ಧನಂಜಯ್, ಕೈಲಾಸ್, ಉಪೇಂದ್ರ, ರಾಮಕೃಷ್ಣ, ಅರುಣ ಕುಮಾರ್ ಮಲ್ಲೇಶ್ ಪ್ರತಾಪ್ ಅವರನ್ನು ಎಸ್ಪಿ ಕಾರ್ತೀಕ್‌ರೆಡ್ಡಿ ಪ್ರಶಂಸಿಸಿದ್ದಾರೆ.ಕೆ ಕೆ ಪಿ ಸುದ್ದಿ 01 (1):
ಶಕ್ತಿವೇಲುಕೆ ಕೆ ಪಿ ಸುದ್ದಿ01 (2)ಶಶಿಕುಮಾರ್ 45