ಬಸವಸಾಗರ ಅಣೆಕಟ್ಟೆಯಿಂದ ಕೃಷ್ಣಾನದಿಗೆ 2 ಲಕ್ಷ ಕ್ಯುಸೆಕ್ ನೀರು

| Published : Jul 25 2024, 01:21 AM IST

ಬಸವಸಾಗರ ಅಣೆಕಟ್ಟೆಯಿಂದ ಕೃಷ್ಣಾನದಿಗೆ 2 ಲಕ್ಷ ಕ್ಯುಸೆಕ್ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾನದಿಯಲ್ಲಿ ಪ್ರವಾಹ ಮೊದಲೆ ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳಿಗೆ ಆಹಾರ ಇಲಾಖೆಯಿಂದ ದವಸ ದಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. ನಡುಗಡ್ಡೆ ಗ್ರಾಮಗಳಿಗೆ ಹೆಚ್ಚಿನ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗುವುದೆಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಬಸವಸಾಗರ ಅಣೆಕಟ್ಟೆಯಿಂದ ಕೃಷ್ಣಾನದಿಗೆ 2 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಪರಿಣಾಮ ತಾಲೂಕಿನ ನಡುಗಡ್ಡೆ ಗ್ರಾಮಗಳಾದ ಯಳಗುಂದಿ, ಹಂಚಿನಾಳ, ಕಡದರಗಡ್ಡಿ, ಯರಗೋಡಿ ಹಾಗೂ ನದಿಯ ದ್ವೀಪಗಳಾದ ಕರಕಲಗಡ್ಡಿ, ವಂಕಮ್ಮನಗಡ್ಡಿ, ಮಾದರಗಡ್ಡಿಗಳ ಸಂಪರ್ಕ ಕಡಿತಗೊಂಡಿದೆ. ನಡುಗಡ್ಡೆಯ ಜನರು ಪರ ಊರುಗಳಿಗೆ ತೆರಳಲು ಹಾಗೂ ತಾಲೂಕ ಕೇಂದ್ರ ಆಗಮಿಸಲು ಜಲದುರ್ಗದ ಸೇತುವೆ ಮೂಲಕ 40 ರಿಂದ 45 ಕಿ. ಮೀ. ಸುತ್ತು ಬಳಸಿ ಬರುವ ಸಂಕಷ್ಟ ಎದುರಾಗಿದೆ. ಶೀಲಹಳ್ಳಿ ಸೇತುವೆ ಮೂಲಕ ತಾಲೂಕು ಕೇಂದ್ರ 15 ಕಿ.ಮೀ ದೂರ ಆಗುತ್ತದೆ. ಸೇತುವೆ ಮುಳಗಡೆ ನಡುಗಡ್ಡೆ ಜನರಿಗೆ ಸಂಕಷ್ಟ ತಂದೊಡ್ಡಿದೆ.

ಆಹಾರ ದವಸ ದಾನ್ಯಗಳ ಪೂರೈಕೆ: ಕೃಷ್ಣಾನದಿಯಲ್ಲಿ ಪ್ರವಾಹ ಮೊದಲೆ ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳಿಗೆ ಆಹಾರ ಇಲಾಖೆಯಿಂದ ದವಸ ದಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. ನಡುಗಡ್ಡೆ ಗ್ರಾಮಗಳಿಗೆ ಹೆಚ್ಚಿನ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗುವುದೆಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.

33 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 2,00,000 ಕ್ಯುಸೆಕ್ ಒಳ ಹರಿವು ಇದೆ. ಕೃಷ್ಣಾನದಿಗೆ 2,02,625 ಟಿಎಂಸಿ ಹೊರ ಹರಿವು ಇದ್ದು 492.25 ಮೀ. ಎತ್ತರದ ಜಲಾಶಯದಲ್ಲಿ 490.84 ಮೀಟರ್ ನೀರು ಸಂಗ್ರಹವಿದೆ. 27,212 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಶೀಲಹಳ್ಳಿ ಸೇತುವೆ ಮುಳಗಡೆ ಆಗಿದ್ದರಿಂದ ನಡುಗಡ್ಡೆ ಜನರಿಗೆ ಹೆಚ್ಚಿನ ಸಾರಿಗೆ ಬಸ್‌ಗಳ ಓಡಾಟಕ್ಕೆ ಸಾರಿಗೆ ಇಲಾಖೆ ತಿಳಿಸಿದ್ದು ನಾಳೆಯಿಂದ ಬಸ್ ಸಂಚಾರ ನಡೆಯಲಿದೆ. ನಡುಗಡ್ಡೆ ಜನರ ಹೇಳಿಕೆಯಂತೆ 2 ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಗಳ ಸಂಗ್ರಹವಿದೆ. ಅಗತ್ಯ ಬಿದ್ದರೆ ಪೂರೈಕೆ ಮಾಡಲಾಗುವುದು. ದ್ವೀಪದಲ್ಲಿ ಇರುವ ಜನರು ಹೊರಗಡೆ ಬರಲು ಒಪ್ಪಿದರೆ ಕೂಡಲೇ ಹೊರ ತರಲಾಗುವುದು.

ಎಸ್.ಶಂಶಾಲಂ, ತಹಸೀಲ್ದಾರ್‌, ಲಿಂಗಸುಗೂರು.