ಕುಖ್ಯಾತ ಕಳ್ಳರಿಬ್ಬರ ಬಂಧನ, ಲಕ್ಷಾಂತರ ಮೌಲ್ಯದ ವಾಹನ ವಶ

| Published : Dec 04 2024, 12:30 AM IST

ಸಾರಾಂಶ

ಪ್ರಕರಣ ಬೇಧಿಸಲು ಪುರಪೊಲೀಸ್ ಠಾಣೆ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇವರಿಬ್ಬರನ್ನು ಬಂಧಿಸಿ, ಒಂದು ಮಹೇಂದ್ರ ಸ್ಕಾರ್ಪಿಯೋ, ಬೊಲೇರೋ ಪಿಕ್‌ಅಪ್ ವಾಹನ, ಎರಡು ಪಲ್ಸರ್ ಬೈಕ್ ಹಾಗೂ ಒಂದು ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು ೧೦ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಸಫಲರಾಗಿರುವ ಪುರಪೊಲೀಸ್ ಠಾಣೆಯ ಪೊಲೀಸರು ಬಂಧಿತರಿಂದ ಒಂದು ಕಾರು, ಒಂದು ಬೊಲೇರೋ ಪಿಕ್‌ಅಪ್ ವಾಹನ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಉದಯ್(೨೩), ಮಾಣಿಕ್ಯ(೨೮) ಬಂಧಿತರು. ಇವರು ಚನ್ನಪಟ್ಟಣ ಪುರಪೊಲೀಸ್ ಠಾಣೆ, ಬಾಗಲೂರು, ಹೊಸಕೋಟೆ, ಕ್ಯಾತಸಂದ್ರ, ಶಿರಾ, ಬೆಂಗಳೂರಿನ ಜೆ.ಪಿ.ನಗರ, ಸುಬ್ರಮಣ್ಯಪುರ, ತಳಘಟ್ಟಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಆಕ್ಟೋಬರ್‌ನಲ್ಲಿ ನಗರದ ಕುವೆಂಪು ನಗರದ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣ ಬೇಧಿಸಲು ಪುರಪೊಲೀಸ್ ಠಾಣೆ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇವರಿಬ್ಬರನ್ನು ಬಂಧಿಸಿ, ಒಂದು ಮಹೇಂದ್ರ ಸ್ಕಾರ್ಪಿಯೋ, ಬೊಲೇರೋ ಪಿಕ್‌ಅಪ್ ವಾಹನ, ಎರಡು ಪಲ್ಸರ್ ಬೈಕ್ ಹಾಗೂ ಒಂದು ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್‌ಪಿ ಕೆ.ಸಿ.ಗಿರಿ ಹಾಗೂ ಪುರಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕಿರಣ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಹರೀಶ್ ನೇತೃತ್ವದಲ್ಲಿ ಸಿಬ್ಬಂದಿ ಮಹೇಶ್, ಸುಭಾಷ್, ಬೈರಪ್ಪ, ಶರತ್‌ಗೌಡ, ತವನಪ್ಪ ಇದ್ದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಕರಣ ಬೇಧಿಸಿದ ಪುರಪೊಲೀಸ್ ಠಾಣೆಯ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸುರೇಶ್, ರಾಮಚಂದ್ರ ಹಾಗೂ ಡಿವೈಎಸ್‌ಪಿ ಕೆ.ಸಿ.ಗಿರಿ, ಪುರಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕಿರಣ್ ಅಭಿನಂದಿಸಿದ್ದಾರೆ.