ವಿಷ ಆಹಾರ ಹಾಕಿ ನವಿಲುಗಳ ಹತ್ಯೆ

| Published : Aug 18 2024, 01:50 AM IST

ಸಾರಾಂಶ

ಹೊಳೆನರಸೀಪುರ ತಾಲೂಕಿನ ಜಕ್ಕವಳ್ಳಿ ಸೋಮನಹಳ್ಳಿ ರಸ್ತೆಯಲ್ಲಿ ಕಿಡಿಗೇಡಿಗಳು ವಿಷ ಮಿಶ್ರಣ ಮಾಡಿ ಎರಡು ನವಿಲುಗಳನ್ನು ಹತ್ಯೆ ಮಾಡಿದ್ದು, ಈ ರೀತಿ ಬಹಳ ನವಿಲುಗಳನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿ ಆರೋಪಿಸಿದ್ದಾರೆ. ಕಸಬಾ ಹೋಬಳಿಯ ಜಕ್ಕವಳ್ಳಿ, ಸೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಸಾವಿರಾರು ನವಿಲುಗಳು ಇದ್ದು, ಇತ್ತೀಚಿನ ದಿನಗಳಲ್ಲಿ ಗ್ರಾಮದ ಒಳಗೆ ಕೋಳಿಗಳಿಗೆ ಹಾಕುವ ಭತ್ತ ರಾಗಿಯನ್ನು ಬಿಡದೇ ತಿನ್ನುತ್ತಿದ್ದವು ಎನ್ನಲಾಗಿದೆ. ನವಿಲುಗಳ ಹಾವಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮತ್ತು ಬೆಳೆಗಳ ರಕ್ಷಣೆಗಾಗಿ ಕಬ್ಬಿನ ಗದ್ದೆಗಳಲ್ಲಿ ಹಾಗೂ ಇದರೆ ಸ್ಥಳಗಳಲ್ಲಿ ನವಿಲುಗಳಿಗೆ ವಿಷ ನೀಡಿ ಕೊಲ್ಲಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಜಕ್ಕವಳ್ಳಿ ಸೋಮನಹಳ್ಳಿ ರಸ್ತೆಯಲ್ಲಿ ಕಿಡಿಗೇಡಿಗಳು ವಿಷ ಮಿಶ್ರಣ ಮಾಡಿ ಎರಡು ನವಿಲುಗಳನ್ನು ಹತ್ಯೆ ಮಾಡಿದ್ದು, ಈ ರೀತಿ ಬಹಳ ನವಿಲುಗಳನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿ ಆರೋಪಿಸಿದ್ದಾರೆ.ತಾಲೂಕಿನ ಕಸಬಾ ಹೋಬಳಿಯ ಜಕ್ಕವಳ್ಳಿ, ಸೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಸಾವಿರಾರು ನವಿಲುಗಳು ಇದ್ದು, ಇತ್ತೀಚಿನ ದಿನಗಳಲ್ಲಿ ಗ್ರಾಮದ ಒಳಗೆ ಕೋಳಿಗಳಿಗೆ ಹಾಕುವ ಭತ್ತ ರಾಗಿಯನ್ನು ಬಿಡದೇ ತಿನ್ನುತ್ತಿದ್ದವು ಎನ್ನಲಾಗಿದೆ. ನವಿಲುಗಳ ಹಾವಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮತ್ತು ಬೆಳೆಗಳ ರಕ್ಷಣೆಗಾಗಿ ಕಬ್ಬಿನ ಗದ್ದೆಗಳಲ್ಲಿ ಹಾಗೂ ಇದರೆ ಸ್ಥಳಗಳಲ್ಲಿ ನವಿಲುಗಳಿಗೆ ವಿಷ ನೀಡಿ ಕೊಲ್ಲಲಾಗುತ್ತಿದೆ ಎಂದು ತಿಳಿದು ಬಂದಿದೆ. ವನ್ಯಜೀವಿಯ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮಕೈಗೊಂಡು ನವಿಲುಗಳ ರಕ್ಷಣೆಗೆ ಮುಂದಾಗಬೇಕೆಂದು ಪ್ರತ್ಯಕ್ಷದರ್ಶಿಗಳು ಒತ್ತಾಯಿಸಿದ್ದಾರೆ.