ಸಾರಾಂಶ
ಡಾ. ದೀಪಕ್ ಅವರು ಶೃಂಗೇರಿಯಲ್ಲಿ ವೈದ್ಯರಾಗಿದ್ದು , ಸೀನು ಡೇನಿಯಲ್ ಶಿವಮೊಗ್ಗದ ಟೈಯರ್ ರಿಸೊಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದರು. ಸ್ನೇಹಿತರೆಲ್ಲ ಒಟ್ಟಾಗಿ ತಿರುಗಾಡಲು ಬಂದ ಸಮಯದಲ್ಲಿ ದುರ್ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಸೀತಾನದಿಯಲ್ಲಿ ಸ್ನಾನಕ್ಕೆ ಇಳಿದ ಇಬ್ಬರು ಯುವಕರು ಈಜು ಬರದ ಕಾರಣ ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ನಾಡ್ಫಾಲು ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.ಮೃತರನ್ನು ಶಿವಮೊಗ್ಗ ಮೂಲದ ಡಾ. ದೀಪಕ್ (34) ಹಾಗೂ ಸೀನು ಡೇನಿಯಲ್ (40) ಎಂದು ಗುರುತಿಸಲಾಗಿದೆ. ಡಾ. ದೀಪಕ್ ಅವರು ಶೃಂಗೇರಿಯಲ್ಲಿ ವೈದ್ಯರಾಗಿದ್ದು , ಸೀನು ಡೇನಿಯಲ್ ಶಿವಮೊಗ್ಗದ ಟೈಯರ್ ರಿಸೊಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದರು. ಸ್ನೇಹಿತರೆಲ್ಲ ಒಟ್ಟಾಗಿ ತಿರುಗಾಡಲು ಬಂದ ಸಮಯದಲ್ಲಿ ದುರ್ಘಟನೆ ನಡೆದಿದೆ.
ಸ್ಥಳೀಯರ ನೆರವಿನಿಂದ ಮೃತ ದೇಹವನ್ನು ಮೇಲೆತ್ತಲಾಗಿದೆ, ಶವವನ್ನು ಮಣಿಪಾಲಕ್ಕೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.------
ಫೋಕ್ಸೋ ಪ್ರಕರಣ ಆರೋಪಿಗೆ 20 ವರ್ಷ ಜೈಲುಬೈಂದೂರು: ಇಲ್ಲಿನ ಹಳ್ಳಿಹೊಳೆ ಎಂಬಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲುವಾಸ ವಿಧಿಸಿದೆ.
ಆರೋಪಿ ಕಟ್ಟೆಹಾಡಿ ನಿವಾಸಿ ಪ್ರಶಾಂತ ಪೂಜಾರಿ (25) ಮೇಲೆ ಶಂಕರನಾರಾಯಣ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಮಹಾಬಲೇಶ್ವರ ಎಸ್.ಎನ್. ಅವರು ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ಪ್ರಕರಣದ ಬಗ್ಗೆ ಸಾಕ್ಷಿಗಳ ವಿಚಾರಣೆ ನಡೆದು ಆರೋಪಿಯ ಅಪರಾಧಿ ಎಂದು ಸಾಬೀತಾಗಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು 20 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ವಿಶೇಷ ಅಭಿಯೋಜಕರಾದ ವೈ.ಟಿ. ರಾಘವೇಂದ್ರ ಅವರು ವಾದ ಮಂಡಿಸಿದ್ದರು.