ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವು

| Published : Oct 21 2024, 12:43 AM IST

ಸಾರಾಂಶ

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ ಶವಗಳಿಗಾಗಿ ಶೋಧ ಕಾರ್ಯ ನಡೆಸಿ ಮುತ್ತುರಾಜ್ ಎಂಬ ವಿದ್ಯಾರ್ಥಿಯ ಶವ ಹೊರತೆಗೆದಿದ್ದು, ಇನ್ನೊಬ್ಬ ವಿದ್ಯಾರ್ಥಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮೃತ ರಂಜನ್ ಸೋಮನಹಳ್ಳಿ ಐಟಿಐ ಕಾಲೇಜು ವಿದ್ಯಾರ್ಥಿಯಾದರೆ, ಮುತ್ತುರಾಜ್‌ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ.

ಮದ್ದೂರು: ಕೆರೆಯಲ್ಲಿ ಈಜಲು ಹೋಗಿದ್ದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ದೇಶಹಳ್ಳಿ ಸಮೀಪದ ಮದ್ದೂರು ಕೆರೆಯಲ್ಲಿ ಭಾನುವಾರ ಸಂಜೆ ಜರುಗಿದೆ. ತಾಲೂಕಿನ ಶಂಕರಪುರ ಗ್ರಾಮದ ರಂಜನ್‌ (16), ಮುತ್ತುರಾಜ್‌ (15) ಮೃತ ವಿದ್ಯಾರ್ಥಿಗಳು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ ಶವಗಳಿಗಾಗಿ ಶೋಧ ಕಾರ್ಯ ನಡೆಸಿ ಮುತ್ತುರಾಜ್ ಎಂಬ ವಿದ್ಯಾರ್ಥಿಯ ಶವ ಹೊರತೆಗೆದಿದ್ದು, ಇನ್ನೊಬ್ಬ ವಿದ್ಯಾರ್ಥಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮೃತ ರಂಜನ್ ಸೋಮನಹಳ್ಳಿ ಐಟಿಐ ಕಾಲೇಜು ವಿದ್ಯಾರ್ಥಿಯಾದರೆ, ಮುತ್ತುರಾಜ್‌ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಇಬ್ಬರು ತಮ್ಮ ಮೂವರು ಸಹಪಾಠಿಗಳೊಂದಿಗೆ ಭಾನುವಾರ ಸಂಜೆ 4.30ರ ವೇಳೆಗೆ ಮದ್ದೂರು ಕೆರೆಗೆ ಈಜಲು ಬಂದಿದ್ದಾರೆ. ಈ ಪೈಕಿ ರಂಜನ್‌ ಮತ್ತು ಮುತ್ತುರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಮೂವರು ಭಯಭೀತರಾಗಿ ನೀರಿನಿಂದ ಹೊರಬಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮೃತ ಬಾಲಕರಿಬ್ಬರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ದೇಶಹಳ್ಳಿ, ಶಂಕರಪುರ ಮತ್ತು ಆಸುಪಾಸಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಬೆಸಗರಹಳ್ಳಿ ಪೊಲೀಸ್‌ ಠಾಣೆ ಪಿಎಸ್‌ಐ ಸತೀಶ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಕೃಷ್ಣಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.