ಕಳ್ಳರಿಬ್ಬರ ಬಂಧನ: ₹16 ಲಕ್ಷ ಮೌಲ್ಯದ ವಸ್ತುಗಳ ವಶ

| Published : Dec 18 2024, 12:45 AM IST

ಕಳ್ಳರಿಬ್ಬರ ಬಂಧನ: ₹16 ಲಕ್ಷ ಮೌಲ್ಯದ ವಸ್ತುಗಳ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗಳ ಕಿಟಕಿ ಮತ್ತು ಬಾಗಿಲುಗಳನ್ನು ಮುರಿದು ಕಳವು ಮಾಡುತ್ತಿದ್ದ ಕದೀಮರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು ₹16,00,000 ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಸೂಫಿಯಾನ್ ಷರೀಫ್‌ (ಮುಬಾರಕ್) ಹಾಗೂ ಜಾವೀದ್ ಬಂಧಿತ ಆರೋಪಿಗಳು.

- ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಂದ ಕಾರ್ಯಾಚರಣೆ । ಜಿಲ್ಲಾ ಎಸ್‌ಪಿ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹರಿಹರ

ಮನೆಗಳ ಕಿಟಕಿ ಮತ್ತು ಬಾಗಿಲುಗಳನ್ನು ಮುರಿದು ಕಳವು ಮಾಡುತ್ತಿದ್ದ ಕದೀಮರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು ₹16,00,000 ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಸೂಫಿಯಾನ್ ಷರೀಫ್‌ (ಮುಬಾರಕ್) ಹಾಗೂ ಜಾವೀದ್ ಬಂಧಿತ ಆರೋಪಿಗಳು.

ಜಿಲ್ಲೆಯ ವಿವಿಧೆಡೆ ಕಳವು ಕೃತ್ಯ ಎಸಗುತ್ತಿದ್ದ ಆರೋಪಿಗಳಿಂದ 160 ಗ್ರಾಂ ತೂಕದ ₹12,80,000 ಮೌಲ್ಯದ ಬಂಗಾರದ ಆಭರಣಗಳು ಮತ್ತು 1 ಕೆಜಿ 600 ಗ್ರಾಂ ತೂಕದ 1,35,000 ಮೌಲ್ಯದ ಬೆಳ್ಳಿಯ ಸಾಮಾನುಗಳು ಹಾಗೂ ₹35,000 ಮೌಲ್ಯದ ಟಿ.ವಿ. ಹಾಗೂ ಕೃತ್ಯಕ್ಕೆ ಬಳಸಿದ ₹1,50,000 ಬೆಲೆ ಬಾಳುವ 2 ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ.

ಕಳೆದ ಸೆ.12ರಂದು ಅವರಾವತಿ ಕಾಲೋನಿಯ ಜ್ಯೋಹಿತ್ ಡಿಸೋಜಾ ಕಾರ್ಯನಿಮಿತ್ತ ಕಾರ್ಯಕ್ರಮಕ್ಕೆ ತೆರಳಿದ್ದರು. ಆಗ ಮನೆ ಕಿಟಕಿಯ ಸರಳನ್ನು ಕಟ್ ಮಾಡಿ, ಮನೆಯೊಳಗೆ ಪ್ರವೇಶಿಸಿದ ಸದರಿ ಕಳ್ಳರು ಬೆಡ್‍ ರೂಂನಲ್ಲಿ ಇದ್ದ 10 ಗ್ರಾಂ ತೂಕದ ₹65000 ಬೆಲೆ ಬಾಳುವ ಬಂಗಾರದ ಕಿವಿಯೋಲೆ, ₹35000 ಬೆಲೆ ಬಾಳುವ ಟಿವಿ ಕದ್ದಿದ್ದಾರೆ. ಮರುದಿನ ಮನೆಗೆ ಬಂದು ನೋಡಿದಾಗ, ವಸ್ತುಗಳು ಕಳುವಾದ ಸಂಗತಿ ತಿಳಿದುಬಂದಿದೆ. ತಕ್ಷಣ ಡಿಸೋಜಾ ಅವರು ನೀಡಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ, ದಾವಣಗೆರೆ ವಿದ್ಯಾನಗರ ಠಾಣೆ, ಗಾಂಧಿನಗರ ಠಾಣೆಗಳಲ್ಲಿ ದಾಖಲಾದ ಒಟ್ಟು 5 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಸಗರಿ, ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ ಎಸ್. ಕುಪ್ಪೇಲೂರು ಮಹಾದೇವ ಸಿದ್ದಪ್ಪ ಭತ್ತೆ, ಎ.ಎಸ್.ಐ ತಿಪ್ಪೇಸ್ವಾಮಿ, ಎಚ್.ಸಿ.ರಮೇಶ, ಜಿ.ಎನ್. ನೀಲಮೂರ್ತಿ, ದಾದಾಪೀರ್, ಸಿಪಿಸಿ ಸತೀಶ್ ಟಿ.ವಿ., ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಅರ್ಜುನ್ ರಾಯಲ್ ಗಂಗಾಧರ, ಪ್ರಸನ್ನಕಾಂತ, ಸುರೇಶ ಉಪ್ಪಾರ, ಋಷಿರಾಜ, ಸಿದ್ದಪ್ಪ ಮುರುಳಿ ಮುಂತಾದವರು ಭಾಗವಹಿಸಿದ್ದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಇಲಾಖೆ ಸಾಧನೆ ಶ್ಲಾಘಿಸಿದ್ದಾರೆ.

- - - -17ಎಚ್‍ಆರ್‍ಆರ್04:

ಹರಿಹರದಲ್ಲಿ ಕಳ್ಳರಿಂದ ವಶಕ್ಕೆ ಪಡೆದ ವಸ್ತುಗಳೊಂದಿಗೆ ಗ್ರಾಮಾಂತರ ಠಾಣೆ ಪೊಲೀಸರ ತಂಡ.