ಸಾರಾಂಶ
ತುರುವೇಕೆರೆ ಟೌನ್ ಬಾಣಸಂದ್ರ ರಸ್ತೆಯಲ್ಲಿರುವ ರಂಗನಾಥ ವೈನ್ಸ್ ಪಕ್ಕದ ಸೊಸೈಟಿ ಮುಂಭಾಗದಲ್ಲಿ ಏ.17ರಂದು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು: ತುರುವೇಕೆರೆ ಟೌನ್ ಬಾಣಸಂದ್ರ ರಸ್ತೆಯಲ್ಲಿರುವ ರಂಗನಾಥ ವೈನ್ಸ್ ಪಕ್ಕದ ಸೊಸೈಟಿ ಮುಂಭಾಗದಲ್ಲಿ ಏ.17ರಂದು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿ ಕರಡಗೆರೆ ಗ್ರಾಮದಲ್ಲಿ ಏ.18ರಂದು ಕೊಳೆತ ಸ್ಥಿತಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ ಶವ ಸೇರಿ ಒಟ್ಟು ಎರಡು ಶವಗಳು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.