Two-wheeler crashes into electric pole; artist dies.
ಭದ್ರಾವತಿ: ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವ ರಂಗ ಕಲಾವಿದ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಟ್ಟಿ ಹೊಸೂರು ಬಳಿ ಸಂಭವಿಸಿದೆ.
ಹರ್ಷ (31) ಮೃತಪಟ್ಟ ಕಲಾವಿದ. ಇವರು ತಾಲೂಕಿನ ಗೋಣಿಬೀಡಿನ ನಿವಾಸಿ ಮಂಜೇಗೌಡ-ಪ್ರೇಮ ದಂಪತಿ ಪುತ್ರ. ಸಂಬಂಧಿಯನ್ನು ಬಿಟ್ಟು ಬರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡು ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಹರ್ಷ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.ಡಿ4-ಬಿಡಿವಿಟಿ3
ಯುವ ಕಲಾವಿದ ಹರ್ಷ