ಸಾರಾಂಶ
ಚನ್ನಪಟ್ಟಣ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ೧೧ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದಾರೆ.ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ಮಂಜುನಾಥ್ ಹಾಗೂ ಮುನಾವರ್ ಬಂಧಿತರು. ಮಂಜುನಾಥ್ ದ್ವಿಚಕ್ರ ವಾಹನ ಕಳುವು ಮಾಡಿದ ಆರೋಪಿ ಹಾಗೂ ಮುನಾವರ್ ಎಂಬಾತನನ್ನು ಈತನಿಂದ ಕಳವು ಮಾಡಿದ್ದ ವಾಹನಗಳು ಹಾಗೂ ವಾಹನಗಳ ಬಿಡಿಭಾಗ ಖರೀದಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತರಿಂದ ೩ದ್ವಿಚಕ್ರ ವಾಹನ ಹಾಗೂ ವಾಹನಗಳ ಬಿಡಿಭಾಗದ ಮಾರಾಟದಿಂದ ಬಂದ ೪೪ಸಾವಿರ ರೂ.ನಗದು ವಶಪಡಿಸಿಕೊಳ್ಳಲಾಗಿದೆ.ಮಾ.೧೬ರಂದು ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮಂಜುನಾಥ್‌ನನ್ನು ಬಂಧಿಸಿದ್ದರು. ಈ ವೇಳೆ ಈತ ವಾಹನಗಳು ಹಾಗೂ ವಾಹನಗಳ ಬಿಡಿಭಾಗಗಳನ್ನು ಮುನಾವರ್‌ಗೆ ಮಾರಾಟ ಮಾಡಿರುವ ಕುರಿತು ಮಾಹಿತಿ ನೀಡಿದ್ದ. ವಿಚಾರಣೆ ವೇಳೆ ಈತ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ೬ಪ್ರಕರಣ, ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ಹಾಗೂ ಅಕ್ಕೂರು ಪೊಲೀಸ್ ಠಾಣೆಯ ೧ಪ್ರಕರಣ, ಮಂಡ್ಯದ ಜಿಲ್ಲೆಯ ೩ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಡಿವೈಎಸ್‌ಪಿ ಕೆ.ಸಿ.ಗಿರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರಕಾಶ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಮನೋಹರ್ ನೇತೃತ್ವದಲ್ಲಿ ಪೇದೆಗಳಾದ ಶಿವು, ಪವನ್ ಕುಮಾರ್, ತಾಂತ್ರಿಕ ವಿಭಾಗದ ಮಹದೇವು ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.