ಸಾರಾಂಶ
ವಿದ್ಯುತ್ ಸ್ಪರ್ಶದಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗರಿಘಟ್ಟದಲ್ಲಿ ಗುರುವಾರ ನಡೆದಿದೆ. ಗರಿಘಟ್ಟದ ಮಹೇಂದ್ರ ಎಂಬುವರ ನೂತನ ಮನೆ ನಿರ್ಮಾಣದ ಬಾಗಿಲು ಕಿಟಕಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವ ವೇಳೆ ಸೃಜನ್ ಗೆ ವಿದ್ಯುತ್ ತಗುಲಿದೆ. ಇವನನ್ನು ರಕ್ಷಿಸಲು ಹೋದ ಸಂಜಯ್‌ಗೂ ವಿದ್ಯುತ್ಯು ಸ್ಪರ್ಶಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಆಸ್ಪತ್ರೆ ಬಳಿ ತೆರಳಿದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ವಿದ್ಯುತ್ ಸ್ಪರ್ಶದಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗರಿಘಟ್ಟದಲ್ಲಿ ಗುರುವಾರ ನಡೆದಿದೆ.ಹುಲಿಕಲ್ ಸಿದ್ದಾಪುರ ಗ್ರಾಮದ ಸೃಜನ್ (19), ಅರಕಲಗೂಡು ಸುಭಾಷ್ ನಗರದ ಸಂಜಯ್ (19) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಗರಿಘಟ್ಟದ ಮಹೇಂದ್ರ ಎಂಬುವರ ನೂತನ ಮನೆ ನಿರ್ಮಾಣದ ಬಾಗಿಲು ಕಿಟಕಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವ ವೇಳೆ ಸೃಜನ್ ಗೆ ವಿದ್ಯುತ್ ತಗುಲಿದೆ. ಇವನನ್ನು ರಕ್ಷಿಸಲು ಹೋದ ಸಂಜಯ್‌ಗೂ ವಿದ್ಯುತ್ಯು ಸ್ಪರ್ಶಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಆಸ್ಪತ್ರೆ ಬಳಿ ತೆರಳಿದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.