ಸಾರಾಂಶ
ಹೆನ್ನಲಿ ಗ್ರಾಮದ ಎತ್ತಿನಹೊಳೆ ಸೇತುವೆ ಸಮೀಪ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಕಾಶ್ ನದಿಗೆ ಇಳಿದು ಈಜಾಡುತ್ತಿದ್ದ ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಲಾರಂಭಿಸಿದ್ದಾನೆ. ಈತನನ್ನು ರಕ್ಷಿಸಲು ತೆರಳಿದ ಭರತ್ ಸಹ ನೀರಿನ ಸೆಳೆತದಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಬಾಳೆಹಳ್ಳ ಗ್ರಾಮದ ಭರತ್ (೩೪) ಹಾಗೂ ತಾಲೂಕಿನ ಕಾಟಿಹಳ್ಳಿ ಗ್ರಾಮದ ಪ್ರಕಾಶ್(೨೯) ಮೃತರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಹೆನ್ನಲಿ ಗ್ರಾಮದ ಸಮೀಪದ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಬಾಳೆಹಳ್ಳ ಗ್ರಾಮದ ಭರತ್ (೩೪) ಹಾಗೂ ತಾಲೂಕಿನ ಕಾಟಿಹಳ್ಳಿ ಗ್ರಾಮದ ಪ್ರಕಾಶ್(೨೯) ಮೃತರು.
ಮೃತ ಪ್ರಕಾಶ್ ಮನೆಗೆ ಬಂದಿದ್ದ ಸಂಬಂಧಿಕರು ಶನಿವಾರ ಮಧ್ಯಾಹ್ನ ಪ್ರಕಾಶ್ ಸಹೋದರನ ಆಟೋದಲ್ಲಿ ಹೇಮಾವತಿ ತೀರದಲ್ಲಿ ವಿಹಾರಕ್ಕಾಗಿ ಆಗಮಿಸಿದ್ದರು. ಹೆನ್ನಲಿ ಗ್ರಾಮದ ಎತ್ತಿನಹೊಳೆ ಸೇತುವೆ ಸಮೀಪ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಕಾಶ್ ನದಿಗೆ ಇಳಿದು ಈಜಾಡುತ್ತಿದ್ದ ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಲಾರಂಭಿಸಿದ್ದಾನೆ. ಈತನನ್ನು ರಕ್ಷಿಸಲು ತೆರಳಿದ ಭರತ್ ಸಹ ನೀರಿನ ಸೆಳೆತದಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ನದಿಯಿಂದ ಹೊರತೆಗೆದು ಕ್ರಾಫರ್ಡ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.