ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಕ ಮೊಗವೀರ ಮಹಾಜನ ಸಂಘದ ಸಂಚಾಲಿತ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ–2026’ ಮಹೋತ್ಸವದ ಆರನೇ ದಿನ, ಶುಕ್ರವಾರ ನೆರೆದಿದ್ದ ಸಾವಿರಾರು ಮಂದಿ ಭಕ್ತರು ನೂರಾರು ಪುಟಾಣಿ ಶಾರದೆಯನ್ನು ನೋಡಿ ಸಂಭ್ರಮಿಸಿದರು.
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಕ ಮೊಗವೀರ ಮಹಾಜನ ಸಂಘದ ಸಂಚಾಲಿತ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ–2026’ ಮಹೋತ್ಸವದ ಆರನೇ ದಿನ, ಶುಕ್ರವಾರ ನೆರೆದಿದ್ದ ಸಾವಿರಾರು ಮಂದಿ ಭಕ್ತರು ನೂರಾರು ಪುಟಾಣಿ ಶಾರದೆಯನ್ನು ನೋಡಿ ಸಂಭ್ರಮಿಸಿದರು.
ಶಾಲಿನಿ ಡಾ. ಜಿ. ಶಂಕರ್ ಮುಖ್ಯ ವೇದಿಕೆಯಲ್ಲಿ ಪುಟಾಣಿ ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರ 3 - 9 ವರ್ಷದೊಳಗಿನ ಸ್ಪರ್ಧೆಯಲ್ಲಿ 76 ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಾಕ್ಷಾತ್ ಶಾರದೆಯಂತೆ ಈ ಪುಟಾಣಿಗಳು ಆಕರ್ಷಕ ವೇಷಭೂಷಣ ಹಾಗೂ ಮುದ್ದಾದ ಅಭಿನಯ ನೆರೆದಿದ್ದವರ ಮನಸೂರೆಗೊಂಡರು.ಮಲ್ಪೆಯ ತಪಸ್ಯ ನಾಗಾಪ್ರಸಾದ್ ಪ್ರಥಮ ಸ್ಥಾನ, 8,000 ರು. ನಗದು, ಕಿದಿಯೂರಿನ ಸಾನಿಕ ದ್ವಿತೀಯ ಸ್ಥಾನ, 6,000 ರು. ನಗದು ಹಾಗೂ ಸುರತ್ಕಲ್ನ ಪ್ರಶ್ವಿ ಎಸ್. ಪುತ್ರನ್ ತೃತೀಯ ಸ್ಥಾನ, 4,000 ನಗದು ರು. ಬಹುಮಾನ ಗಳಿಸಿದರು. ಎಲ್ಲ ಮಕ್ಕಳಿಗೂ ತಲಾ 1,000 ರು. ನೀಡಿ ಪ್ರೋತ್ಸಾಹಿಸಲಾಯಿತು.ಈ ವಿಜೇತ ಮಕ್ಕಳನ್ನು ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅಭಿನಂದಿಸಿದರು.ಬಹುಮಾನ ವಿತರಣಾ ಸಮಾರಂಭದಲ್ಲಿ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.