ಉದಯ ಕಾಮಿಡಿ ಪುಟಾಣಿ 123 ಕಾರ್ಯಕ್ರಮಕ್ಕೆ ಪುಟಾಣಿ ದೀಕ್ಷಾ ಜೈಶಂಕರ್ ಆಯ್ಕೆ

| Published : Dec 15 2024, 02:01 AM IST

ಉದಯ ಕಾಮಿಡಿ ಪುಟಾಣಿ 123 ಕಾರ್ಯಕ್ರಮಕ್ಕೆ ಪುಟಾಣಿ ದೀಕ್ಷಾ ಜೈಶಂಕರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಉದಯ ಕಾಮಿಡಿ ಪುಟಾಣಿ 1,2,3 ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪುಟಾಣಿ ದೀಕ್ಷಾ ಜೈಶಂಕರ್ ಅವರನ್ನು ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಸಂಪತ್ ಕುಮಾರ್, ಕಾರ್ಯದರ್ಶಿ ಪಿ.ವೀಣಾ ಹಾಗೂ ಕುಟುಂಬದವರು ಅಭಿನಂದಿಸಿದ್ದಾರೆ.

ಚಾಮರಾಜನಗರ: ಉದಯ ಕಾಮಿಡಿ ಟಿವಿಯಲ್ಲಿ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರಸಾರವಾಗುವ ಪುಟಾಣಿ ಏಜೆಂಟ್ 1,2,3 ಕಾರ್ಯಕ್ರಮಕ್ಕೆ ನಗರದ ಸೆಂಟ್ ಫ್ರಾನ್ಸಿಸ್ ಐಸಿಐಸಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿರುವ ದೀಕ್ಷಾ ಜೈಶಂಕರ್ ಆಯ್ಕೆಯಾಗಿದ್ದಾರೆ. ಈ ಪುಟಾಣಿಯ ಕಾರ್ಯಕ್ರಮ ಡಿ.16 ಸೋಮವಾರ ಸಂಜೆ 6 ಗಂಟೆಗೆ ಉದಯ ಕಾಮಿಡಿ ಟಿವಿಯಲ್ಲಿ ಪ್ರಸಾರವಾಗಲಿದೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, ಪುಟಾಣಿ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಕುಟುಂಬದವರು ಕೋರಿದ್ದಾರೆ. ನಗರದ ಡಾ .ಬಿ .ಆರ್ ಅಂಬೇಡ್ಕರ್ ಬಡಾವಣೆಯಲ್ಲಿ ವಾಸವಾಗಿರುವ ಕೆ.ಚೈತ್ರ ಜೈಶಂಕರ್ ದಂಪತಿ ಪುತ್ರಿ. ಅಭಿನಂದನೆ: ಉದಯ ಕಾಮಿಡಿ ಪುಟಾಣಿ 1,2,3 ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪುಟಾಣಿ ದೀಕ್ಷಾ ಜೈಶಂಕರ್ ಅವರನ್ನು ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಸಂಪತ್ ಕುಮಾರ್, ಕಾರ್ಯದರ್ಶಿ ಪಿ.ವೀಣಾ ಹಾಗೂ ಕುಟುಂಬದವರು ಅಭಿನಂದಿಸಿದ್ದಾರೆ.