ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಜುಬೇದ ಅವರಿಗೆ ಉದಯ ಕನ್ನಡಿಗ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ನರಸಿಂಹರಾಜಪುರ: ಉದಯ ಟಿ.ವಿ. ನೀಡುವ ಉದಯ ಕನ್ನಡಿಗ ಅವಾರ್ಡ್ -2026 ರಲ್ಲಿ ಸಮಾಜ ಸೇವೆ ವಿಭಾಗದಲ್ಲಿ ಇಲ್ಲಿನ ಸಮಾಜ ಸೇವಕಿ ಜುಬೇದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಜುಬೇದ ಅವರಿಗೆ ಉದಯ ಕನ್ನಡಿಗ ಅವಾರ್ಡ್ ನೀಡಿ ಸನ್ಮಾನಿಸಲಾಯಿತು. ಸಾಧನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ಜ್ಯೋತಿ ಈ ಪ್ರಶಸ್ತಿ ವಿತರಿಸಿದರು. ಈ ಸಮಾರಂಭದಲ್ಲಿ ಚಲನ ಚಿತ್ರ ನಟರಾದ ಸುಧಾರಾಣಿ, ರಮೇಶ್, ಉಪೇಂದ್ರ, ಸಂಗೀತ ನಿರ್ದೇಶಕ ಹಂಸಲೇಖ, ಡಾಲಿ ಧನಂಜಯ್ ಮುಂತಾದವರು ಪಾಲ್ಗೊಂಡಿದ್ದರು.ಉದಯ ಟಿ.ವಿ.ಯ ಉದಯ ಕನ್ನಡಿಗ ಅವಾರ್ಡ್ - 2026 ರ ಕಾರ್ಯಕ್ರಮ ಉದಯ ಟಿ.ವಿ.ಯಲ್ಲಿ ಅ. 31 ಹಾಗೂ ನವಂಬರ್ 1 ರಂದು ಸಂಜೆ 6 ಗಂಟೆ ಪ್ರಸಾರವಾಗಲಿದೆ. ನಾನು ಈ ಪ್ರಶಸ್ತಿಯನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿದ್ದೇನೆ ಎಂದು ಪ್ರಶಸ್ತಿ ಪಡೆದ ಸಮಾಜ ಸೇವಕಿ ಜುಬೇದ ಕನ್ನಡಪ್ರಭಕ್ಕೆ ತಿಳಿಸಿದರು.
ಸಮಾಜ ಸೇವಕಿ ಜುಬೇದ 106 ಅನಾಥ ಶವ ಸಂಸ್ಕಾರ,ಅನಾಥರ ರಕ್ಷಣೆ ಹಾಗೂ ಆರೈಕೆ, ಕೋವಿಡ್ ಸಂದರ್ಭದಲ್ಲಿ ಸ್ವತಃ ಆ್ಯಂಬುಲೆನ್ಸ್ ಚಾಲನೆ ಮಾಡಿ ನೂರಾರು ರೋಗಿಗಳ ರಕ್ಷಣೆ, 56 ಬಾರಿ ರಕ್ತದಾನ, ಹೆಣ್ಣು ಮಕ್ಕಳ ಸ್ವಾವ ಲಂಭನೆಗಾಗಿ ಮಹಿಳಾ ಸಮಾಜದ ಮೂಲಕ ನೀಡಿದ ತರಬೇತಿ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.