ಸಾರಾಂಶ
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್ ಆ್ಯಂಡ್ ಆರ್ಕಿಟೆಕ್ಟ್ಸ್(ಎಸಿಸಿಇಎ) ವತಿಯಿಂದ ಎಸ್‌ಕೆಎಫ್ ಎಲಿಕ್ಸರ್ ಮತ್ತು ಎಸ್‌ಕೆಎಫ್ ವುಲ್‌ಕಾನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಡಿಯಾಳಿ ಓಶಿಯನ್ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಎಂಜಿನಿಯರ್ಸ್ ಮೀಟ್ ಮಂಗಳವಾರ ರಾತ್ರಿ ನಡೆಯಿತು.
ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್ ಆ್ಯಂಡ್ ಆರ್ಕಿಟೆಕ್ಟ್ಸ್(ಎಸಿಸಿಇಎ) ವತಿಯಿಂದ ಎಸ್‌ಕೆಎಫ್ ಎಲಿಕ್ಸರ್ ಮತ್ತು ಎಸ್‌ಕೆಎಫ್ ವುಲ್‌ಕಾನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಡಿಯಾಳಿ ಓಶಿಯನ್ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಎಂಜಿನಿಯರ್ಸ್ ಮೀಟ್ ಮಂಗಳವಾರ ರಾತ್ರಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಕ್ರೆಡೈ ಅಧ್ಯಕ್ಷ ಸುಧೀರ್ ಶೆಟ್ಟಿ ಅವರು, ಕಠಿಣ, ಪರಿಶ್ರಮ, ಸರಳತೆ ಯಶಸ್ಸನ್ನು ಗಳಿಸುವುಕ್ಕೆ ಪೂರಕವಾಗಲಿದೆ. ನಿರಂತರ ಅಭಿವೃದ್ಧಿ ಹೊಂದುತ್ತಿರುವ ಉಡುಪಿ ನಗರಕ್ಕೆ ಎಂಜಿನಿಯರ್ ಕೊಡುಗೆ ಬಹಳಷ್ಟಿದೆ. ಜನಸಾಮಾನ್ಯರಿಗೆ ಉದ್ಯೋಗ ನೀಡುವ ಮೂಲಕ ಜೀವನ ನಿರ್ವಹಣೆಗೆ ಎಂಜಿಯರ್ಸ್‌ಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಮೂಡುಬಿದಿರೆಯ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಅಧ್ಯಕ್ಷ ಡಾ.ಜಿ. ರಾಮಚಂದ್ರ ಆಚಾರ್ ಮಾತನಾಡಿ, ತಾನು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಸಮಾಜದ ಇತರರ ಬದುಕಿಗೆ ಆಸರೆಯಾಗಬೇಕು, ನೀರು, ಗಾಳಿ, ಆಹಾರದ ಕುರಿತು ಕಾಳಜಿ ವಹಿಸಿದರೆ ಆರೋಗ್ಯವಂತರಾಗಿ ಸುದೃಢ ಸಮಾಜಕ್ಕೆ ವಿಶೇಷವಾದ ಕೊಡುಗೆ ನೀಡಬಹುದು ಎಂದರು.ಐಐಟಿ ಪುಣೆಯ ಟೆಕ್ನಿಕಲ್ ಕನ್ಸಲ್ಟಂಟ್ ರಮೇಶ್ ನಾಗರಾಜನ್ ಅವರು ನೀರಿನ ಸದ್ಬಳಕೆ, ತ್ಯಾಜ್ಯ ನೀರಿನ ಮರುಬಳಕೆ ಮತ್ತು ನೀರು ಮಾಲಿನ್ಯದ ಕುರಿತು ಸಮಗ್ರ ತಾಂತ್ರಿಕ ಮಾಹಿತಿ ನೀಡಿದರು.
ಸಂಘದ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ ಶುಭಾಶಂಸನೆಗೈದರು. ಕಾರ್ಯದರ್ಶಿ ಮಹೇಶ್ ಕಾಮತ್ ಉಪಸ್ಥಿತರಿದ್ದರು. ಎಸಿಸಿಇಎ ಅಧ್ಯಕ್ಷ ಯೋಗೀಶ್ಚಂದ್ರಧರ ಸ್ವಾಗತಿಸಿ ಪ್ರಸ್ತಾವನೆಗೈದರು. ಎಸಿಸಿಇಎ ಗೌರವಾಧ್ಯಕ್ಷ ಎಂ. ಗೋಪಾಲ್ ಭಟ್, ಗೌರವಾಧ್ಯಕ್ಷ ಪಾಂಡುರಂಗ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ಅಮಿತ್ ಅರವಿಂದ್ ಸಂಸ್ಥೆ ನಡೆಸಿದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ, ವಂದಿಸಿದರು. ಸಂದೀಪ್ ಭಕ್ತ ನಿರೂಪಿಸಿದರು. ಸಂಸ್ಥೆಯ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು;Resize=(128,128))
;Resize=(128,128))
;Resize=(128,128))
;Resize=(128,128))