ಮಂಗಳೂರಿನ ಅಮ್ಮೆಂಬಳ ಶಂಕರ ನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ ಸುಹಾಸಂ ಸಹಕಾರದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ನೀಡುವ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ನಡೆಯಿತು.
ಉಡುಪಿ: ಮಂಗಳೂರಿನ ಅಮ್ಮೆಂಬಳ ಶಂಕರ ನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ ಸುಹಾಸಂ ಸಹಕಾರದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ನೀಡುವ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ನಡೆಯಿತು.
ಹಿರಿಯ ಲೇಖಕರಾದ ಡಾ.ಎನ್.ಟಿ. ಭಟ್ (ಅವರ ಪರವಾಗಿ ಪುತ್ರ), ಸಂಸ್ಕೃತ ಪ್ರಾಧ್ಯಾಪಕ, ವಿದ್ವಾಂಸ ಡಾ.ಎನ್. ಲಕ್ಷ್ಮೀನಾರಾಯಣ ಭಟ್ಟ ಹಾಗೂ ವಿಮರ್ಶಕ ಡಾ. ಅಜಕ್ಕಳ ಗಿರೀಶ ಭಟ್ಟ ಅವರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾದ್ಯಕ್ಷ ಯು. ವಿಶ್ವನಾಥ ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನದ ಪ್ರೊ.ಎ.ವಿ. ನಾವಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಸುರತ್ಕಲ್ ಎನ್ಐಟಿಕೆ ಮಾಜಿ ನಿರ್ದೇಶಕ ಡಾ. ಎಚ್. ಸುಧಾಕರ ನಾಯಕ್, ಉಡುಪಿ ತಾಸಾಪ ಅಧ್ಯಕ್ಷ ರವಿರಾಜ ಎಚ್.ಪಿ. ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಎಲ್. ಸಾಮಗ ಅಭಿನಂದನಾ ನುಡಿಗಳನ್ನಾಡಿದರು. ಪೂರ್ಣಿಮಾ ಜರ್ನಾದನ ಕಾರ್ಯಕ್ರಮ ನಿರೂಪಿಸಿದರು.ಸಂಸ್ಕೃತ ಅಷ್ಟು ಸುಲಭದ ಭಾಷೆಯಲ್ಲ. ಕನ್ನಡದ ಮೂಲಪದಗಳಲ್ಲಿ ದೇಶ, ಕಾಲಕ್ಕೆ ಅನುಗುಣವಾಗಿ ವಿಕೃತಿ/ಬದಲಾವಣೆ ಆಗುತ್ತದೆ. ಆದರೆ ಸಂಸ್ಕೃತಕ್ಕೆ ವಿಕೃತಿ ಇಲ್ಲ. ಈ ಭಾಷೆಯಲ್ಲಿ ಒಂದು ತಪ್ಪು ಮಾಡಬಾರದು. ಸಂಸ್ಕೃತದಲ್ಲಿ ಒಂದು ಶಬ್ದವೂ ವಿಕಾರ ಹೊಂದಬಾರದು. ಈ ಭಾಷೆಗೆ ಮುದಿತನ, ಮರಣವಿಲ್ಲ. ಪಾಣಿನಿ ವ್ಯಾಕರಣದಿಂದ ಸಂಸ್ಕೃತ ನಿತ್ಯ ಯೌವ್ವನ, ನಿರ್ವಿಕಾರವಾಗಿದೆ.-ಡಾ.ಎನ್. ಲಕ್ಷ್ಮೀನಾರಾಯಣ ಭಟ್ಟ