ಉಡುಪಿ: ಆಟಿಡೊಂಜಿ ಸಂಭ್ರಮದ ವಿಪ್ರಕೂಟ

| Published : Aug 20 2025, 02:00 AM IST

ಸಾರಾಂಶ

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಉಡುಪಿ ಕನ್ನರ್ಪಾಡಿಯ ಶ್ರೀದೇವಿ ಸಭಾ ಭವನದಲ್ಲಿ ‘ಆಟಿಡೊಂಜಿ ವಿಪ್ರಕೂಟ’ ಕಾರ್ಯಕ್ರಮ ಬಹಳ‍ ಸಂಭ್ರಮದಿಂದ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಿಂದ ಆರಂಭವಾಗಿ ಸಭಾ ಕಾರ್ಯಕ್ರಮದಲ್ಲಿ - ಸಂಘಟನೆ ಮತ್ತು ಆಟಿ ಮಾಸದ ಬಗ್ಗೆ ವಿಶೇಷ ಮಾಹಿತಿಯನ್ನು ವಿದ್ವಾನ್ ಹೆರ್ಗ ಹರಿದಾಸ ಭಟ್ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಉಡುಪಿ ಕನ್ನರ್ಪಾಡಿಯ ಶ್ರೀದೇವಿ ಸಭಾ ಭವನದಲ್ಲಿ ‘ಆಟಿಡೊಂಜಿ ವಿಪ್ರಕೂಟ’ ಕಾರ್ಯಕ್ರಮ ಬಹಳ‍ ಸಂಭ್ರಮದಿಂದ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಿಂದ ಆರಂಭವಾಗಿ ಸಭಾ ಕಾರ್ಯಕ್ರಮದಲ್ಲಿ - ಸಂಘಟನೆ ಮತ್ತು ಆಟಿ ಮಾಸದ ಬಗ್ಗೆ ವಿಶೇಷ ಮಾಹಿತಿಯನ್ನು ವಿದ್ವಾನ್ ಹೆರ್ಗ ಹರಿದಾಸ ಭಟ್ ನೀಡಿದರು.ಮುಖ್ಯ ಅತಿಥಿಗಳಾಗಿ ಮಾಹೆಯ ಡಾ. ಶರತ್ ಕೆ. ರಾವ್, ಉಡುಪಿಯ ನಿಕಟಪೂರ್ವ ಶಾಸಕ ಕೆ. ರಘುಪತಿ ಭಟ್, ಶ್ರೀದೇವಿ ಸಭಾಭವನದ ಮಾಲಕ ರಮೇಶ್ ಬೀಡು, ನಗರಸಭಾ ಸದಸ್ಯ ಕೃಷ್ಣ ರಾವ್ ಕೊಡಂಚ ಹಾಗೂ ಖ್ಯಾತ ರಂಗಿತರಂಗ ಸಿನಿಮ ಖ್ಯಾತಿಯ ಖ್ಯಾತಿಯ ರಾಧಿಕಾ ನಾರಾಯಣ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು. ಪ್ರಧಾನ ಕಾರ್ಯದರ್ಶಿ ಕೆ. ದುರ್ಗಾಪ್ರಸಾದ್ ಭಾರ್ಗವ್ ಸ್ವಾಗತಿಸಿದರು.

ಈ ಸಂದರ್ಭ ಕಾರ್ಯಕ್ರಮವನ್ನು ಸಂಯೋಜಿಸಿದವರಿಗೆ, ವಿವಿಧ ಕಾರ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಲವಾರು ಸಾಧಕರನ್ನು ಅಭಿನಂದಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ಮಾಸದ ವಿಶೇಷ ಖಾದ್ಯಗಳ ಸಹ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಉಡುಪಿ ತಾಲೂಕಿನ ಸುಮಾರು 26 ವಿಪ್ರ ವಲಯಗಳು ಮತ್ತು 7 ವಿವಿಧ ಬ್ರಾಹ್ಮಣ ಸಂಘಗಳ ಸುಮಾರು ಒಂದು ಸಾವಿರ ಜನರು ಸೇರಿದ್ದರು. ಕೋಶಾಧಿಕಾರಿ ಹಯವದನ ಭಟ್ ವಂದಿಸಿದರು.