ಉಡುಪಿ: ಮಹಿಳಾ ಹಸಿಮೀನು ಮಾರಾಟಗಾರರ ಸಂಘ ಅಧ್ಯಕ್ಷರಾಗಿ ಬೇಬಿ ಎಚ್. ಸಾಲ್ಯಾನ್

| Published : Feb 23 2025, 12:36 AM IST

ಉಡುಪಿ: ಮಹಿಳಾ ಹಸಿಮೀನು ಮಾರಾಟಗಾರರ ಸಂಘ ಅಧ್ಯಕ್ಷರಾಗಿ ಬೇಬಿ ಎಚ್. ಸಾಲ್ಯಾನ್
Share this Article
  • FB
  • TW
  • Linkdin
  • Email

ಸಾರಾಂಶ

ಉಪಾಧ್ಯಕ್ಷರಾಗಿ ಶಾರದಾ ಮೆಂಡನ್ ಶಿರ್ವ, ಯಶೋದಾ ಕುಂದರ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಮಮತಾ ಎನ್. ಕುಂದರ್ ಕೆಮ್ಮಣ್ಣು, ಜೊತೆಕಾರ್ಯದರ್ಶಿಗಳಾಗಿ ಜಯಂತಿ ಎನ್. ಕೋಟ್ಯಾನ್ ಕಲ್ಯಾಣಪುರ, ರತ್ನ ಕುಂದರ್ ಬ್ರಹ್ಮಾವರ, ಕೋಶಾಧಿಕಾರಿಯಾಗಿ ವಿಮಲಾ ಕುಂದರ್ ಕಡಿಯಾಳಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅನುಪಮ ಸಂಜಯ್ ಉಡುಪಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘ ಮುಂದಿನ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬೇಬಿ ಎಚ್. ಸಾಲ್ಯಾನ್ ಕೊಡವೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶಾರದಾ ಮೆಂಡನ್ ಶಿರ್ವ, ಯಶೋದಾ ಕುಂದರ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಮಮತಾ ಎನ್. ಕುಂದರ್ ಕೆಮ್ಮಣ್ಣು, ಜೊತೆಕಾರ್ಯದರ್ಶಿಗಳಾಗಿ ಜಯಂತಿ ಎನ್. ಕೋಟ್ಯಾನ್ ಕಲ್ಯಾಣಪುರ, ರತ್ನ ಕುಂದರ್ ಬ್ರಹ್ಮಾವರ, ಕೋಶಾಧಿಕಾರಿಯಾಗಿ ವಿಮಲಾ ಕುಂದರ್ ಕಡಿಯಾಳಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅನುಪಮ ಸಂಜಯ್ ಉಡುಪಿ ಆಯ್ಕೆಯಾಗಿದ್ದಾರೆ.ಅಲ್ಲದೇ ವಿವಿಧ ಮಾರುಕಟ್ಟೆಗಳ ಆಡಳಿತ ಕಮಿಟಿ ಸದಸ್ಯರಾಗಿ ಸರಸ್ವತಿ ಕರ್ಕೇರ ಉಡುಪಿ, ಯಶೋದಾ ಸುವರ್ಣ ಶಿರ್ವ, ಪ್ರೇಮ ಕುಂದರ್ ಬ್ರಹ್ಮಾವರ, ಮೀನಾಕ್ಷಿ ಎಚ್. ಸಾಲ್ಯಾನ್ ಉಡುಪಿ, ಶುಭ ಮಂಗಳ ಉಡುಪಿ, ಗಂಗಾ ಕರ್ಕೇರ ಸಾಸ್ತಾನ, ಯಶೋದಾ ಖಾರ್ವಿ ಸಾಸ್ತಾನ, ಶಾರದಾ ಸಾಸ್ತಾನ, ಲೀಲಾ ಮೂಳೂರು, ಪುಷ್ಪಾ ಬಂಗೇರ ಬ್ರಹ್ಮಾವರ, ಸರೋಜಾ ಸಾಲ್ಯಾನ್ ಬ್ರಹ್ಮಾವರ, ವಸಂತಿ ಬಂಗೇರ ಬ್ರಹ್ಮಾವರ, ನೀತಾ ಅಮೀನ್ ಬ್ರಹ್ಮಾವರ, ಸುಮತಿ ಅಮೀನ್ ಬ್ರಹ್ಮಾವರ, ಶಕುಂತಳಾ ಅಮೀನ್ ಬ್ರಹ್ಮಾವರ, ಸುಕನ್ಯ ವೈ. ಶಿರ್ವ, ತುಳಸಿ ಸಾಲ್ಯಾನ್ ಅಂಬಾಗಿಲು, ವಸಂತಿ ಅಂಬಾಗಿಲು, ಮುತ್ತು ಕುಂದರ್ ಕಟಪಾಡಿ, ವಸಂತಿ ಸುವರ್ಣ ಕಟಪಾಡಿ, ಭಾರತಿ ತಿಂಗಳಾಯ ಕಡಿಯಾಳಿ, ಉಷಾ ಮೈಂದನ್ ಗುಡ್ಡೆ ಅಂಗಡಿ, ಸುಶೀಲಾ ಬಂಗೇರ ಗುಡ್ಡೆ ಅಂಗಡಿ ಆಯ್ಕೆಯಾಗಿದ್ದಾರೆ.