ಉಡುಪಿ ಬನ್ನಂಜೆ ಗಣೇಶೋತ್ಸವ: ಸಾಧಕರಿಗೆ ಸನ್ಮಾನ

| Published : Sep 11 2024, 01:07 AM IST

ಉಡುಪಿ ಬನ್ನಂಜೆ ಗಣೇಶೋತ್ಸವ: ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನಂಜೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಗಣೇಶೋತ್ಸವದ ರಜತ ಸಂಭ್ರಮ ಸಮಾರಂಭದ ಕೊನೆಯ ದಿನ ಸುಬ್ರಮಣ್ಯ ಮಠದ ವಿದ್ವಾಂಸ ಡಾ. ಆನಂದತೀರ್ಥ ಉಪಾಧ್ಯಾಯ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ಬನ್ನಂಜೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಗಣೇಶೋತ್ಸವದ ರಜತ ಸಂಭ್ರಮ ಸಮಾರಂಭದ ಕೊನೆಯ ದಿನ ಮಂಗಳವಾರ ಸುಬ್ರಮಣ್ಯ ಮಠದ ವಿದ್ವಾಂಸ ಡಾ. ಆನಂದತೀರ್ಥ ಉಪಾಧ್ಯಾಯ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.

ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪರಿಸರದ ಜನತೆಯಲ್ಲಿ ಧರ್ಮ ಜಾಗೃತಿ ಮೂಡಿಸಲು ಹುಟ್ಟುಹಾಕಿದ ಈ ಸಾರ್ವಜನಿಕ ಗಣೇಶೋತ್ಸವವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ ನಡೆಯುತ್ತಾ ಇದೀಗ ರಜತ ಮಹೋತ್ಸವ ಆಚರಿಸುತ್ತಿರುವುದು ಅಭಿನಂದನೀಯ ಎಂದು ಶುಭ ಹಾರೈಸಿದರು.ದೇವಳದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ರಾಮ್, ಸ್ಥಳೀಯ ಉದ್ಯಮಿಗಳಾದ ಪ್ರಭಾಕರ್ ಪೂಜಾರಿ, ದಿನೇಶ್ ಪುತ್ರನ್, ಮನದೀಪ್ ಸನ್ನಿ, ಕಲ್ಯಾಣ ಸಿಂಗ್, ಶ್ರೀಕಾಂತ್ ಕುಂಡಂತಾಯ, ಶೈಲೇಶ್ ಪ್ರಭು, ಬಿಲ್ಲವ ಸೇವಾ ಸಂಘ ಅಧ್ಯಕ್ಷ ಮಾಧವ ಬನ್ನಂಜೆ, ಪೊಲೀಸ್ ಇಲಾಖೆಯ ಹರೀಶ್ ಕುಂದರ್ ಉಪಸ್ಥಿತರಿದ್ದರು.ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಎಂ. ಪ್ರಭಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಯೋಗೀಶ್ ಭಂಡಾರಿ ಬನ್ನಂಜೆ, ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯೋಗೀಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ, ಕೋಶಾಧಿಕಾರಿ ಯು. ಸುಬ್ರಹ್ಮಣ್ಯ ರಾವ್, ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಇದ್ದರು.ಇದೇ ಸಂದರ್ಭ ಕಳೆದ 25 ವರ್ಷಗಳಿಂದ ಗಣೇಶೋತ್ಸವದಲ್ಲಿ ವಿಶೇಷ ಸಲ್ಲಿಸಿದ ದೇವಳದ ಪ್ರಧಾನ ಅರ್ಚಕ ಪಾಡಿಗಾರು ವಾಸುದೇವ ಉಪಾಧ್ಯಾಯ, ಗಣಪತಿ ವಿಗ್ರಹ ರಚನೆಕಾರ ಕ್ಷಿಪ್ರಪ್ರಸಾದ ಚಿಟ್ಪಾಡಿ, ವಿಶೇಷ ಹೂವಿನ ಅಲಂಕಾರಗೈದ ದಾಮೋದರ್ ಸುವರ್ಣ, ಶಶಿಧರ್ ಶೆಟ್ಟಿ ಅಂಬಲಪಾಡಿ, ಮುಕೇಶ್ ಬನ್ನಂಜೆ, ಗೀತಾ ಶೇರಿಗಾರ್ ಅವರನ್ನು ಶಾಸಕರು ಗೌರವಿಸಿದರು.

ಶುಭ ಸುಬ್ರಮಣ್ಯ ರಾವ್ ಸ್ವಾಗತಿಸಿದರು. ಸುಲೋಚನಾ ವಂದಿಸಿದರು. ಕಲಾತರಂಗ ಕಾಪು ತಂಡದವರಿಂದ ತುಳು ಹಾಸ್ಯಮಯ ನಾಟಕ ‘ಒರಿಯೆ’ ಪ್ರದರ್ಶನಗೊಂಡಿತು.