ಉಡುಪಿ: ಸೌಂದರ್ಯ ತಜ್ಞೆಯರ ಕಾರ್ಯಾಗಾರ ಸಂಪನ್ನ

| Published : Aug 11 2025, 12:54 AM IST

ಸಾರಾಂಶ

ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸೌಂದರ್ಯ ತಜ್ಞೆಯರು ಸೇರಿಕೊಂಡು ಉಡುಪಿಯ ಕಿದಿಯೂರು ಹೋಟೆಲ್‌ನ ಅನಂತ ಶಯನ ಸಭಾ ಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸೌಂದರ್ಯ ತಜ್ಞೆಯರು ಸೇರಿಕೊಂಡು ಉಡುಪಿಯ ಕಿದಿಯೂರು ಹೋಟೆಲ್‌ನ ಅನಂತ ಶಯನ ಸಭಾ ಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಯಿತು.ಈ ಕಾರ್ಯಾಗಾರವನ್ನು ಉಡುಪಿಯ ಹಿರಿಯ ಸೌಂದರ್ಯ ತಜ್ಞೆ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ, ಲತಾ ವಾದಿರಾಜ್ ಮತ್ತು ಶರ್ಲಿ ಅಮ್ಮನ್ನ ಉದ್ಘಾಟಿಸಿದರು.ನಂತರ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್, ಆಧುನಿಕ ವಿಧಾನದ ಮೇಕಪ್‌ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.ಈ ವೈಶಿಷ್ಟ್ಯಪೂರ್ಣ ಕಾರ್ಯಾಗಾರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 300ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದರು.

ಕಾರ್ಯಕ್ರಮವನ್ನು ರೋಸ್ ಬ್ಯೂಟಿ ಪಾರ್ಲರ್ ಮಾಲಕಿ ಎಡ್ನ ಜತ್ತಣ್ಣ, ಲಕ್ಷ್ಮಿ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್, ಪಟೇಲ್ ಕುಂದಾಪುರ ಆಯೋಜಿಸಿದ್ದರು.