ಉಡುಪಿ: ಕೃಷ್ಣಮಠದಲ್ಲಿ ಭಗವದ್ಗೀತಾ ಯಜ್ಞ ಸಂಪನ್ನ

| Published : Dec 29 2024, 01:15 AM IST

ಉಡುಪಿ: ಕೃಷ್ಣಮಠದಲ್ಲಿ ಭಗವದ್ಗೀತಾ ಯಜ್ಞ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಶನಿವಾರ ಭಗವದ್ಗೀತಾ ಯಜ್ಞವು ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಶನಿವಾರ ಭಗವದ್ಗೀತಾ ಯಜ್ಞವು ಸಂಪನ್ನಗೊಂಡಿತು.

ಈ ಸಂದರ್ಭ ದೇಶ ವಿದೇಶಗಳಿಂದ ಆಗಮಿಸಿದ್ದ ಶ್ರೀ ಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣವನ್ನು ಮಾಡಿದರು. ಶ್ರೀ ಮಠದ ಯೋಗೇಂದ್ರ ಭಟ್, ಹೋಮವನ್ನು ನೆರವೇರಿಸಿದರು.ನಂತರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ಭಗವದ್ಗೀತೆಯಲ್ಲಿ ಎಲ್ಲ ಕಾರ್ಯಗಳನ್ನು ಯಜ್ಞವಾಗಿ ಪರಿವರ್ತಿಸಿಕೊಂಡು ತನ್ಮೂಲಕ ಭಾಗವದನುಗ್ರಹವನ್ನು ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀ ಕೃಷ್ಣ ಪರಮಾತ್ಮ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥದ ಶ್ಲೋಕಗಳ ಮೂಲಕವೇ ಯಜ್ಞವನ್ನು ಆಚರಿಸುವುದು ಬಹಳ ಔಚಿತ್ಯ ಪೂರ್ಣ. ಭಾಗವಹಿಸಿದವರೆಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹ ವಾಗಲಿ ಎಂದು ಹಾರೈಸಿದರು.

ಪೂಜ್ಯ ಪರ್ಯಾಯ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಡಿ.29ರಂದು ಬೃಹತ್ ಗೀತೋತ್ಸವದ ಮಂಗಳೋತ್ಸವ ನಡೆಯಲಿದೆ. ಈ ಪ್ರಯುಕ್ತ ಹರಿಕತೆ, ಯೋಗನೃತ್ಯ, ನೃತ್ಯಗೀತೆ, ಯಕ್ಷಗಾನ, ಸಂಕೀರ್ತನೆ, ಕುಣಿತ ಭಜನೆ, ಕೇರಳ ನೃತ್ಯ, ದಾಂಡಿಯಾ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.