ಉಡುಪಿ: ಪೇಜಾವರ ಮಠದಿಂದ ಭಕ್ತಿರಥ ಯಾತ್ರೆಗೆ ವೈಭವದ ಚಾಲನೆ

| Published : Apr 01 2025, 12:45 AM IST

ಉಡುಪಿ: ಪೇಜಾವರ ಮಠದಿಂದ ಭಕ್ತಿರಥ ಯಾತ್ರೆಗೆ ವೈಭವದ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಪಾಜಕಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ ಭಕ್ತಿ ರಥಯಾತ್ರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ರಥದಲ್ಲಿ ಶ್ರೀ ರಾಮಸೀತಾಲಕ್ಷ್ಮಣ ಆಂಜನೇಯರಿಗೆ ಮಂಗಳಾರತಿ ಬೆಳಗಿ, ನಿಶಾನೆ ತೋರಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಪಾಜಕಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ ಭಕ್ತಿ ರಥಯಾತ್ರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ರಥದಲ್ಲಿ ಶ್ರೀ ರಾಮಸೀತಾಲಕ್ಷ್ಮಣ ಆಂಜನೇಯರಿಗೆ ಮಂಗಳಾರತಿ ಬೆಳಗಿ, ನಿಶಾನೆ ತೋರಿಸಿ ಚಾಲನೆ ನೀಡಿದರು.ನಂತರ ಸಂದೇಶ ನೀಡಿದ ಶ್ರೀಗಳು, ಭಕ್ತಿಯ ಮುದ್ರೆ ಇಲ್ಲದೇ ಯಾವ ಕೆಲಸಕ್ಕೂ ಮೌಲ್ಯ ಬರಲು ಸಾಧ್ಯವಿಲ್ಲ.‌ ಆದೇ ಭಗವರ್ಪಣಾ ಭಾವವೆಂಬ ಭಕ್ತಿಯ ಮುದ್ರೆ ಇಲ್ಲದ ಕಾರ್ಯ ಉಪಯೋಗ ಇಲ್ಲ.‌ ಆದ್ದರಿಂದ ಮಧ್ವಗುರುಗಳು ಕೊಟ್ಟ ಇಂಥಹ ಅರ್ಪಣಾ ಭಾವದ ಭಕ್ತಿಯ ಸಿದ್ಧಾಂತವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡುವ ಕಾರ್ಯವನ್ನು ನಿರಂತರ ಮಾಡಿದ್ದರು. ಅದನ್ನು ಯಥಾಮತಿ ಮುಂದುವರೆಸುವ ಪ್ರಯತ್ನ ಮಾಡ್ತಾ ಇದ್ದೇವೆ ಎಂದರು.

ಪಾಜಕದಿಂದ ಪ್ರಾರಂಭಿಸಿ ಈ ಕರಾವಳಿ ಜಿಲ್ಲೆಗಳಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳು ಹಾಗೂ ಇತರೆ ಧರ್ಮಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತ ಜನರಿಗೆ ಭಕ್ತಿ ಸಿದ್ಧಾಂತದ ಸಾರ ಸಂದೇಶಗಳನ್ನು ತಿಳಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಂಡಿದ್ದೇವೆ. ಸಮಸ್ತ ಆಸ್ತಿಕ ಜನತೆ ಇದರಲ್ಲಿ ಸಹಯೋಗ ಸಹಕಾರ ನೀಡಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ತಿಳಿಸಿದರು.ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟರು ಮಧ್ವರಾಜ ಭಟ್, ವಾದಿರಾಜ ಭಟ್, ಶ್ರೀಕರ ಭಟ್ವರು ರಾಮತಾರಕ ಮಂತ್ರ ಹೋಮ ನೆರವೇಸಿದರು.

ಪ್ರಾಂತ ವಿಹಿಂಪ ಅಧ್ಯಕ್ಷ ಪ್ರೊ ಎಂ.ಬಿ. ಪುರಾಣಿಕ್, ಶಾಸಕ ಸುರೇಶ ಶೆಟ್ಟಿ, ಪೇಜಾವರ ಮಠದ ದಿವಾನರಾದ ಎಂ‌ ರಘುರಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಪೆರಣಂಕಿಲ, ಪ್ರ ಕಾರ್ಯದರ್ಶಿ ನಿಟ್ಟೆ ಪ್ರಸನ್ನಾಚಾರ್ಯ, ಪರಶುರಾಮ ದೇವಳದ ಅರ್ಚಕ ವಿನಯಪ್ರಸಾದ್ ಭಟ್ ಕುಂಜಾರು ದುರ್ಗಾ ದೇವಳದ ಅರ್ಚಕ ರಾಘವೇಂದ್ರ ಭಟ್, ಬೆಳ್ಳೆ ಗ್ರಾಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ, ಕುರ್ಕಾಲು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿಹಿಂಪ ಅಧ್ಯಕ್ಷ ವಿಕಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವೀನ್ ಅಮೀನ್, ಪರಶುರಾಮ ಭಜನಾ ಮಂಡಳಿಯ ಪ್ರಶಾಂತ್ ಶೆಟ್ಟಿ, ಸುಂದರ ಶೆಟ್ಟಿ, ಸದಾನಂದ ಶೆಣೈ, ಸುಭಾಶ್ಚಂದ್ರ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಧ್ವರಾಜ ಭಟ್, ಪಟ್ಟಾಭಿರಾಮ ಆಚಾರ್ಯ, ಪರಶುರಾಮ‌ಭಟ್ ಮೊದಲಾದವರು ಉಪಸ್ಥಿತರಿದ್ದರು.ಸಗ್ರಿ ಅನಂತ ಸಾಮಗ, ವಿಷ್ಣುಮೂರ್ತಿ ಆಚಾರ್ಯ, ಪೆರಣಂಕಿಲ ಶ್ರೀಶ ನಾಯಕ್, ಗಿರಿ ಭಟ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ‌ ಸಂಯೋಜನೆಯಲ್ಲಿ ಸಹಕರಿಸಿದರು.