ಉಡುಪಿ ಬಿಜೆಪಿ ಗುರು ಪೂರ್ಣಿಮೆ ಆಚರಣೆ

| Published : Jul 11 2025, 12:32 AM IST

ಸಾರಾಂಶ

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಗುರು ಪೂರ್ಣಿಮೆ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ‘ಜ್ಞಾನದ ದೀವಿಗೆಯನ್ನು ನೀಡಿ ಬದುಕಿಗೆ ದಾರಿ ತೋರಿದ’ ಗುರುಗಳನ್ನು ಜಿಲ್ಲೆಯಾದ್ಯಂತ ಗೌರವಿಸುವ ಅಭಿಯಾನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಗುರು ಪೂರ್ಣಿಮೆ ಪ್ರಯುಕ್ತ ‘ಜ್ಞಾನದ ದೀವಿಗೆಯನ್ನು ನೀಡಿ ಬದುಕಿಗೆ ದಾರಿ ತೋರಿದ’ ಗುರುಗಳನ್ನು ಜಿಲ್ಲೆಯಾದ್ಯಂತ ಗೌರವಿಸುವ ಅಭಿಯಾನ ನಡೆಸಲಾಯಿತು. ಅದರಂತೆ ಈ ಅಭಿಯಾನದಡಿ ವಿದ್ಯೆ ಕಲಿಸಿದ ಶಿಕ್ಷಕರು, ಸಮಾಜವನ್ನು ತಿದ್ದಿ ತೀಡಿದ ಸಾಧು, ಸಂತರು, ನಾಡಿನ ವಿವಿಧ ಸಾಂಸ್ಕೃತಿಕ, ಕಲಾ ಕ್ಷೇತ್ರಗಳ ಗುರುಗಳನ್ನು ಗೌರವಿಸಲಾಯಿತು.

ವಿಧಾನ ಸಭಾ ಕ್ಷೇತ್ರಗಳು, ಮಂಡಲ ಹಾಗೂ ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಹಿತ ಎಲ್ಲಾ ಸ್ತರದ ಜನಪ್ರತಿನಿಧಿಗಳು ಅಭಿಯಾನ ರೂಪದಲ್ಲಿ ಭಾಗವಹಿಸಿದ್ದರು.

ಅಭಿಯಾನದ ಭಾಗವಾಗಿ ಹಿರೇಬೆಟ್ಟು ಗ್ರಾಮದಲ್ಲಿನ ಎಲ್ಲಾ ರೀತಿಯ ಧಾರ್ಮಿಕ, ದೈವ, ದೇವರ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ರಾಮ ಮಡಿವಾಳ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ ನಾಯಕ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ ಶ್ರೀನಿಧಿ ಹೆಗ್ಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ್ ಕಾಮತ್, ಹಿರೇಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುನಂದನ್ ನಾಯಕ್, ಬಿಜೆಪಿ ಪ್ರಮುಖರಾದ ಸುಂದರ್ ಮೂಲ್ಯ, ವೀರೇಂದ್ರ ಪೂಜಾರಿ ಹಾಗೂ ದೀಪಕ್ ಪೂಜಾರಿ ಇದ್ದರು.