ಸಾರಾಂಶ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಉಡುಪಿ ಶಾಖೆ ವತಿಯಿಂದ ಭಾನುವಾರ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಉಡುಪಿ ಶಾಖೆ ವತಿಯಿಂದ ಭಾನುವಾರ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾಪು ತಾಲೂಕಿನ ತಹಸೀಲ್ದಾರ್ ಡಾ. ಪ್ರತಿಭಾ ಆರ್., ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಎಚ್. ಅಶೋಕ್ ಹಾಗೂ ರಕ್ತನಿಧಿ ವಿಭಾಗದ ಮುಖ್ಯಸ್ಥೆ ವೀಣಾ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ನಂತರ ತಹಸೀಲ್ದಾರ್ ಪ್ರತಿಭಾ ಮಾತನಾಡಿ, ಇವತ್ತಿನ ದಿನಗಳಲ್ಲಿ ರಕ್ತದಾನದ ಅವಶ್ಯಕತೆ ಮತ್ತು ರಕ್ತದಾನ ಮಾಡುವುದರಿಂದ ನಮ್ಮ ಶರೀರದಲ್ಲಿ ಆಗುವ ಲಾಭಗಳ ಬಗ್ಗೆ ವಿವರಿಸಿದರು.ಡಾ. ಅಶೋಕ್ ಅವರು ಶಿಬಿರವನ್ನು ಆಯೋಜಿಸಿದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಸುನೀತ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಉಡುಪಿಯ ಜಿಲ್ಲೆಯ ಶಿಕ್ಷಕರ ಸಂಯೋಜಕ ದಿನೇಶ್ ಕುಂದಾಪುರ, ಶಿಕ್ಷಕ ವೃಂದ, ಪದಾಧಿಕಾರಿಗಳಾದ ನಾಗೇಶ್ ಶೇರಿಗಾರ್, ನಾಗೇಶ್ ನಾಯಕ್, ಧನರಾಜ್ ಶೇರಿಗಾರ್ ಹಾಗೂ ಸಾಧಕರು ಉಪಸ್ಥಿತರಿದ್ದರು.