ಉಡುಪಿ: ಪುತ್ತಿಗೆ ಪರ್ಯಾಯಕ್ಕೆ ಚಪ್ಪರ ಮುಹೂರ್ತ

| Published : Dec 21 2023, 01:15 AM IST

ಸಾರಾಂಶ

ವಿದ್ವಾನ್ ರಾಘವೇಂದ್ರ ಕೊಡಂಚ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂಜಾ ಅನುಷ್ಠಾನಗಳನ್ನು ನಡೆಸಲಾಯಿತು. ನಂತರ ರಾಜೇಶ್ ಮತ್ತು ಪದ್ಮನಾಭ ಮೇಸ್ತ್ರಿ ಅವರಿಗೆ ಅವರಿಗೆ ಚಪ್ಪರ ಹಾಕುವುದಕ್ಕೆ ವೀಳ್ಯ ನೀಡಲಾಯಿತು

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿ ಜ.18ರಂದು ನಡೆಯುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಸಂಪ್ರದಾಯದಂತೆ ಬುಧವಾರ ರಾಜಾಂಗಣದ ಬಳಿ ಚಪ್ಪರ ಮುಹೂರ್ತ ನಡೆಸಲಾಯಿತು.

ಬೆಳಗ್ಗೆ 7.45ಕ್ಕೆ ವಿದ್ವಾನ್ ರಾಘವೇಂದ್ರ ಕೊಡಂಚ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂಜಾ ಅನುಷ್ಠಾನಗಳನ್ನು ನಡೆಸಲಾಯಿತು. ನಂತರ ರಾಜೇಶ್ ಮತ್ತು ಪದ್ಮನಾಭ ಮೇಸ್ತ್ರಿ ಅವರಿಗೆ ಅವರಿಗೆ ಚಪ್ಪರ ಹಾಕುವುದಕ್ಕೆ ವೀಳ್ಯ ನೀಡಲಾಯಿತು.

ಮಠದ ದಿವಾನ ನಾಗರಾಜ ಆಚಾರ್ಯ, ಸ್ವಾಮೀಜಿ ಅವರ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್, ಕಾರ್ಯದರ್ಶಿ ರಾಘವೇಂದ್ರ ಕಿಣಿ, ಕೋಶಾಧಿಕಾರಿ ಕೆ.ರಂಜನ್ ಕಲ್ಕೂರ, ಸಂಚಾಲಕರಾದ ರಮೇಶ್ ಭಟ್ ಕೆ., ಸಮಿತಿಯ ಸದಸ್ಯರಾದ ಗುರುರಾಜ ಉಪಾಧ್ಯ, ವಿಷ್ಣುಮೂರ್ತಿ ಉಪಾಧ್ಯ, ರವೀಂದ್ರ ಆಚಾರ್ಯ, ರಘುಪತಿ ರಾವ್, ಹಯವದನ ಭಟ್, ರಾಮ ಕೊಡಂಚ, ನಾಗರಾಜ ರಾವ್, ರಾಮಚಂದ್ರ ಸನಿಲ್, ಸುಮಿತ್ರಾ ಕೆರೆಮಠ, ಅಮಿತ ಕ್ರಮಧಾರಿ, ಸರೋಜಾ, ಗೀತಾ ಮತ್ತಿತರರಿದ್ದರು.