ಸಾರಾಂಶ
ತಮ್ಮ ಗಳಿಕೆಯ ದೊಡ್ಡ ಪಾಲನ್ನು ಶಿಕ್ಷಣ ಮತ್ತು ಸಮಾಜಕ್ಕೆ ದಾನ ಮಾಡುತ್ತಿರುವ ಮೈಸೂರು ಮರ್ಕಂಟೈಲ್ ಕಂಪನಿ ಲಿ.ನ ನಿರ್ದೇಶಕ ಡಾ. ಎಚ್. ಎಸ್. ಶೆಟ್ಟಿ ಅವರನ್ನು ಸಮಾಜಸೇವಕ ಯು. ವಿಶ್ವನಾಥ ಶೆಣೈ ಭಾನುವಾರ ತಮ್ಮ ಮನೆಯಲ್ಲಿ ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ತಮ್ಮ ಗಳಿಕೆಯ ದೊಡ್ಡ ಪಾಲನ್ನು ಶಿಕ್ಷಣ ಮತ್ತು ಸಮಾಜಕ್ಕೆ ದಾನ ಮಾಡುತ್ತಿರುವ ಮೈಸೂರು ಮರ್ಕಂಟೈಲ್ ಕಂಪನಿ ಲಿ.ನ ನಿರ್ದೇಶಕ ಡಾ. ಎಚ್. ಎಸ್. ಶೆಟ್ಟಿ ಅವರನ್ನು ಸಮಾಜಸೇವಕ ಯು. ವಿಶ್ವನಾಥ ಶೆಣೈ ಭಾನುವಾರ ತಮ್ಮ ಮನೆಯಲ್ಲಿ ಅಭಿನಂದಿಸಿದರು.ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಪಾದಪೂಜೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಶೆಟ್ಟಿ ಅವರಿಗೆ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಿದರು.
ನಂತರ ಸ್ವಾಮೀಜಿ ಆಶೀರ್ಚವನ ನೀಡುತ್ತಾ, ದಾನಿ ವಿಶ್ವನಾಥ ಶೆಣೈ ಮಹಾದಾನಿ ಡಾ. ಎಚ್. ಎಸ್. ಶೆಟ್ಟರನ್ನು ಸಮ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಇದು. ಈರ್ವರಿಂದಲೂ ಇನ್ನೂ ಹೆಚ್ಚು ಸಮಾಜ ಸೇವಾ ಕಾರ್ಯ ನಡೆಯುವಂತೆ ಭಗವಂತ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.ಡಾ. ಎಚ್. ಎಸ್. ಶೆಟ್ಟಿ ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಅವಲೋಕಿಸುತ್ತಾ ನಾಸ್ತಿಕನಾಗಿದ್ದ ತಾನು ಆಸ್ತಿಕನಾಗುವಲ್ಲಿ ಕಾರಣವಾದ ಸಂಗತಿ ವಿವರಿಸಿದರು. ಯು. ವಿಶ್ವನಾಥ ಶೆಣೈ ಸ್ವಾಗತಿಸಿದರು. ಶ್ರೀಮತಿ ಪ್ರಭಾವತಿ ವಿ. ಶೆಣೈ ಉಪಸ್ಥಿತರಿದ್ದ ಆತ್ಮೀಯ ಸಮಾರಂಭದಲ್ಲಿ ಮುರಲಿ ಕಡೆಕಾರ್ ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಎಚ್. ಪಿ. ರವಿರಾಜ್ ವಂದಿಸಿದರು.