ಸಾರಾಂಶ
ಅಂತಾರಾಷ್ಟ್ರೀಯ ಕ್ರೀಡಾ ತರಬೇತಿ ಅಕಾಡೆಮಿ ಆಸ್ಟ್ರೇಲಿಯಾದ ರೈಸಿಂಗ್ ರೂಸ್ ವತಿಯಿಂದ ಉಡುಪಿಯ ಶಾರದಾ ರೆಸಿಡೆನ್ಸಿಯಲ್ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅಂತಾರಾಷ್ಟ್ರೀಯ ಕ್ರೀಡಾ ತರಬೇತಿ ಅಕಾಡೆಮಿ ಆಸ್ಟ್ರೇಲಿಯಾದ ರೈಸಿಂಗ್ ರೂಸ್ ವತಿಯಿಂದ ಉಡುಪಿಯ ಶಾರದಾ ರೆಸಿಡೆನ್ಸಿಯಲ್ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.ಈ ಸಂದರ್ಭ ಶಾರದಾ ರೆಸಿಡೆನ್ಸಿಯಲ್ ಶಾಲೆಯ ನಿರ್ದೇಶಕ ವಿದ್ಯಾವಂತ ಆಚಾರ್ಯ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿಯ ಲಾಭವನ್ನು ಪಡೆಯಬೇಕೆಂದು ಕರೆಕೊಟ್ಟರು.ರೈಸಿಂಗ್ ರೂಸ್ ಪ್ರವರ್ತಕ ಸುಧೀರ್ ನಾಯಕ್, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ತರಬೇತಿಯು ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಿರಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ಟ, ರೈಸಿಂಗ್ ರೂಸ್ ಪ್ರತಿನಿಧಿ ಸಮಾಜ ಸೇವಕ ಕೆ. ಮಹೇಶ ಶೆಣೈ, ಯುವ ಉದ್ಯಮಿ ಕಟಪಾಡಿ ಗೌತಮ್ ಕಾಮತ್ ಉಪಸ್ಥಿತರಿದ್ದರು. ಆಸ್ಟ್ರೇಲಿಯಾದ ಪ್ರಖ್ಯಾತ ತರಬೇತುದಾರ ರಿಚರ್ಡ್ ಕ್ಲಿಫ್ಟನ್, ಫೌಲ್ ಮಂಟೇಗ್ರಾಮಿ, ಜೇಸನ್ ಕಾಕ್ಸ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ವಿಯೋಲ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಕರು, ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಗಾಯತ್ರಿ ಸುಧೀರ್ ನಾಯಕ್ ವಂದಿಸಿದರು.