ಸಾರಾಂಶ
ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ, ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ, ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೀಡಿನಗುಡ್ಡೆ, ರೋಟರಿ ಕ್ಲಬ್ ಮಣಿಪಾಲ ಹಾಗೂ ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಮೇಳ ಗುರುವಾರ ಚಿಟ್ಪಾಡಿ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಜಯಂಟ್ಸ್ ಗ್ರೂಪ್ ಉಡುಪಿ ಕಾರ್ಯದರ್ಶಿ ದಿವಾಕರ್ ಪೂಜಾರಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಶೆಣೈ, ರವಿನಾಥ್ ಪೈ, ರಾಮಚಂದ್ರ ಶೆಣೈ, ವಿಶ್ವಭಾರತಿ ಸೊಸೈಟಿಯ ಸಿಇಓ ಶಶಿಕಿರಣ್ ಉಳಿತ್ತಾಯ, ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷೆ ಶಶಿಕಲಾ ರಾಜ ವರ್ಮ. ಮಿಷನ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿ ರತ್ನಾಕರ ಮುಂತಾದವರಿದ್ದರು.
ಮಿಷನ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೀಪಾ ವೈ. ರಾವ್, ಡಾ.ಅಭಿನಯ್ ಆಶೋಕ್, ಡಾ. ಅರ್ಜುನ್ ಬಳ್ಳಾಲ್, ಡಾ.ವೈಭವ್ ಭಾಗವಹಿಸಿದರು. ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ಸಾಮಾನ್ಯ ಆರೋಗ್ಯ ಹಾಗೂ ಮಧುಮೇಹ ತಪಾಸಣೆ ನಡೆಸಿ, ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.ಸುಮಾರು 300ಕ್ಕೂ ಹೆಚ್ಚಿನ ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. ಶ್ರೀದೇವರ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದ ಸಂಯೋಜಕ ದೇವದಾಸ್ ಕಾಮತ್ ಉಡುಪಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.