ಸಾರಾಂಶ
ಭಾರತೀಯ ಮೂಲದ ಅಂತಾರಾಷ್ಟ್ರೀಯ ಸಂಸ್ಥೆಯಾದ ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ವತಿಯಿಂದ ಜಯಂಟ್ಸ್ ಸಪ್ತಾಹ ಆಚರಣೆ ಹಾಗೂ ಶಾಶ್ವತ ಯೋಜನೆ ಅಂಗವಾಗಿ ಮಂಗವಾರ ಉಡುಪಿ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ರಿಕ್ಷಾ ನಿಲ್ದಾಣ, ಮೇಲ್ಛಾವಣಿಯನ್ನು ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ಮೂಲದ ಅಂತಾರಾಷ್ಟ್ರೀಯ ಸಂಸ್ಥೆಯಾದ ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ವತಿಯಿಂದ ಜಯಂಟ್ಸ್ ಸಪ್ತಾಹ ಆಚರಣೆ ಹಾಗೂ ಶಾಶ್ವತ ಯೋಜನೆ ಅಂಗವಾಗಿ ಮಂಗವಾರ ಉಡುಪಿ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ರಿಕ್ಷಾ ನಿಲ್ದಾಣ, ಮೇಲ್ಛಾವಣಿಯನ್ನು ಉದ್ಘಾಟಿಸಲಾಯಿತು.ಉಡುಪಿ ವಿಧಾನಸಭಾ ಸದಸ್ಯರಾದ ಯಶ್ಪಾಲ್ ಸುವರ್ಣ ಹಾಗೂ ಸಮಾಜ ಸೇವಕರಾದ ವಿಶ್ವನಾಥ್ ಶೆಣೈ ಜೊತೆಗೂಡಿ ರಿಬ್ಬನ್ ಕತ್ತರಿಸಿ ರಿಕ್ಷಾ ನಿಲ್ದಾಣ ಉದ್ಘಾಟಿಸಿದರು.ಈ ಸರಳ ಸಮಾರಂಭದ ವೇದಿಕೆಯಲ್ಲಿ ನಗರ ಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನೂತನ ನಿಲ್ದಾಣದ ರಿಕ್ಷಾ ಚಾಲಕರಿಗೆ ಅನುಮತಿ ಪತ್ರ ವಿತರಿಸಿದರು.
ಸ್ಥಳೀಯ ನಗರ ಸಭಾ ಸದಸ್ಯೆ ಮಾನಸ ಪೈ, ಜಯಂಟ್ಸ್ ಕೇಂದ್ರ ಸಮಿತಿಯ ಸದಸ್ಯ ದಿನಕರ್ ಅಮೀನ್, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್, ಜಯಂಟ್ಸ್ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಚಿದಾನಂದ ಪೈ, ರಮೇಶ್ ಪೂಜಾರಿ, ಜಗದೀಶ್ ಅಮೀನ್, ಡಾ. ನವೀನ್ ಚಂದ್ರ, ಇಕ್ಬಾಲ್ ಮನ್ನಾ, ಲಕ್ಷ್ಮಿಕಾಂತ್ ಬೆಸ್ಕೂರ್, ದೇವದಾಸ್ ಕಾಮತ್, ಆನಂದ್ ಉದ್ಯಾವರ, ರಾಜೇಶ್ ಶೆಟ್ಟಿ, ದಯಾನಂದ ಶೆಟ್ಟಿ, ಕಾರ್ಯದರ್ಶಿ ವಾದಿರಾಜ್ ಸಾಲಿಯಾನ್, ದಿವಾಕರ್ ಪೂಜಾರಿ, ಸಂಘದ ಪದಾಧಿಕಾರಿಗಳು ಹಾಗೂ ರಿಕ್ಷಾ ಮಾಲಕರು, ಚಾಲಕರು ಉಪಸ್ಥಿತರಿದ್ದರು