ಉಡುಪಿ: ಪೂರ್ಣಪ್ರಜ್ಞ ಕಾಲೇಜನಲ್ಲಿ ಪತ್ರಿಕಾ ಬರವಣಿಗೆ ಕಾರ್ಯಾಗಾರ

| Published : Mar 12 2025, 12:46 AM IST

ಉಡುಪಿ: ಪೂರ್ಣಪ್ರಜ್ಞ ಕಾಲೇಜನಲ್ಲಿ ಪತ್ರಿಕಾ ಬರವಣಿಗೆ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಮೀಡಿಯಾ ಕಮಿಟಿಯ ಸಂಯೋಜನೆಯಲ್ಲಿ ಅರ್ಧ ದಿನದ ಪತ್ರಿಕಾ ಬರವಣಿಗೆ ಕಾರ್ಯಾಗಾರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಮೀಡಿಯಾ ಕಮಿಟಿಯ ಸಂಯೋಜನೆಯಲ್ಲಿ ಅರ್ಧ ದಿನದ ಪತ್ರಿಕಾ ಬರವಣಿಗೆ ಕಾರ್ಯಾಗಾರ ಸಂಪನ್ನಗೊಂಡಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಛಾಯಾಚಿತ್ರಗ್ರಹಣದ ಬಗೆಗೆ ಮಾತನಾಡಿದರು. ಪಬ್ಲಿಕ್ ನೆಕ್ಸ್ಟ್ ವರದಿಗಾರ ರಹೀಂ ಉಜಿರೆ, ಪಬ್ಲಿಕ್ ಟಿವಿ ವರದಿಗಾರ ದೀಪಕ್ ಜೈನ್, ಹೊಸದಿಗಂತದ ವರದಿಗಾರ ರಕ್ಷಿತ್ ಬೆಳಪು ಪತ್ರಿಕಾ ವರದಿಯ ಬಗೆಗೆ ಚಿತ್ರಸಹಿತ ವಿವರಿಸಿದರು. ಪಬ್ಲಿಕ್ ಟಿವಿ ಕ್ಯಾಮೆರಾಮನ್ ಚೇತನ್ ಮಟಪಾಡಿ ಲೈವ್ ಕಾರ್ಯಕ್ರಮದ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಅಧ್ಯಕ್ಷತೆ ವಹಿಸಿದರು. ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ವಿಶೇಷ ಅಧಿಕಾರಿಯಾಗಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಶೆಟ್ಟಿ, ಮೀಡಿಯಾ ಕಮಿಟಿ ಸಂಯೋಜಕಿ ಹರಿಣಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಾಗೂ ಕಾರ್ಯಾಗಾರದ ಸಂಯೋಜಕರಾಗಿರುವ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ ಅಳಗೋಡು ನಿರೂಪಿಸಿ, ಸ್ವಾಗತಿಸಿದರು.