ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆಇಲ್ಲಿನ ಕಲ್ಮಾಡಿಯ ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಇದರ ವತಿಯಿಂದ ಗರೋಡಿಯ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಶಶಿಧರ ಎಮ್. ವಡಭಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಗರೋಡಿಯ ಪ್ರಾಂಗಣದಲ್ಲಿ ನಡೆಯಿತು.ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಸಿ ಮತ್ತು ಪಿ.ಯು.ಸಿ. ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ 29 ಮಂದಿ ವಿದ್ಯಾರ್ಥಿಗಳಿಗೆ ಶ್ರೀ ಬ್ರಹ್ಮ ಬೈದೇರುಗಳ ಗಂಧ ಪ್ರಸಾದವನ್ನು ನೀಡಿ, ಶಾಲು ಹೊದೆಸಿ, ಸ್ಮರಣಿಕೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಉಪಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ ವಿನಯ್ ಕುಮಾರ್ ಕಲ್ಮಾಡಿ, ಜತೆ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜತೆ ಕೋಶಾಧಿಕಾರಿ ಜಯಕರ ಪೂಜಾರಿ ಕೊಡವೂರು, ಆಡಳಿತ ಸಮಿತಿ ಸದಸ್ಯರಾದ ಪ್ರಕಾಶ್ ಜಿ. ಕೊಡವೂರು, ಮಧ್ವನಗರ ಶಂಕರ ಪೂಜಾರಿ, ಶೇಖರ್ ಮಾಸ್ಟರ್ ಕಲ್ಮಾಡಿ, ಲಕ್ಷ್ಮಿಣ ಪೂಜಾರಿ ಅಂಬಲಪಾಡಿ, ಬಾಲಕೃಷ್ಣ ಕೊಡವೂರು, ರತ್ನಾಕರ್ ಅಮೀನ್ ಕೊಡವೂರು, ಜಗದೀಶ್ ಬಂಗೇರ ಮಲ್ಪೆ, ಸತೀಶ್ ಬಂಗೇರ ಮಲ್ಪೆ, ಗರೋಡಿ ಮನೆ ನಾರಾಯಣ ಪೂಜಾರಿ, ಸನ್ನುದಾರ ಗಿರೀಶ್ ಕಲ್ಮಾಡಿ, ಗರೋಡಿಯ ನಾಲ್ಕರೆ ಗುರಿಕಾರ ಹಾಗೂ ಕೂಡುಕಟ್ಟಿನ ಗುರಿಕಾರರು, ವಿದ್ಯಾರ್ಥಿಗಳ ಪೋಷಕರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.