ಬಾಲಗಂಗಾಧರ ತಿಲಕರು ಸ್ವಾತಂತ್ರ‍್ಯ ಚಳವಳಿಯ ಕಿಚ್ಚು ಹೆಚ್ಚಿಸಲು, ಹೋರಾಟದಲ್ಲಿ ಜನರು ತೊಡಗಲು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವವು, ಮುಂದೆ ಸಾಮಾಜಿಕ ಸೇವೆ, ಧಾರ್ಮಿಕ ಜಾಗೃತಿಗೆ ಪೂರಕವಾಗಿ ಬೆಳೆದಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹೇಳಿದ್ದಾರೆ.

ಉಡುಪಿ: ಬಾಲಗಂಗಾಧರ ತಿಲಕರು ಸ್ವಾತಂತ್ರ‍್ಯ ಚಳವಳಿಯ ಕಿಚ್ಚು ಹೆಚ್ಚಿಸಲು, ಹೋರಾಟದಲ್ಲಿ ಜನರು ತೊಡಗಲು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವವು, ಮುಂದೆ ಸಾಮಾಜಿಕ ಸೇವೆ, ಧಾರ್ಮಿಕ ಜಾಗೃತಿಗೆ ಪೂರಕವಾಗಿ ಬೆಳೆದಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹೇಳಿದ್ದಾರೆ.ಇಲ್ಲಿನ ಕನ್ನರ್ಪಾಡಿ ಕಿನ್ನಿಮುಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಯೋಧ್ಯೆಯಲ್ಲಿ ಬಹುಕಾಲದ ಕನಸಾದ ರಾಮಮಂದಿರ ನಿರ್ಮಾಣವಾಗಿದೆ, ಇನ್ನು ರಾಮ ರಾಜ್ಯ ನಿರ್ಮಾಣದತ್ತ ಗಮನ ಹರಿಸಬೇಕು ಎಂದರು.

ಪ್ರಸಾದ್ ನೇತ್ರಾಲಯದ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿ, ಸಮಾಜದ ಬಡ, ನೊಂದ ಜನರ ಕಣ್ಣೀರು ಒರೆಸುವ ಸಮಾಜ ಸೇವಕ ಕೃಷ್ಣಮೂರ್ತಿ ಉಡುಪಿಯ ಆಸ್ತಿ ಎಂದರಲ್ಲದೇ ಕಣ್ಣಿನ ಚಿಕಿತ್ಸೆ ನಿಟ್ಟಿನಲ್ಲಿ ಕನ್ನರ್ಪಾಡಿ ಕಿನ್ನಿಮುಲ್ಕಿ ಪರಿಸರವನ್ನು ದತ್ತು ಪಡೆಯುವುದಾಗಿ ಘೋಷಿಸಿದರು.

ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ್ ಶೇರಿಗಾರ್, ಕನ್ನರ್ಪಾಡಿ ದೇವಳದ ಸರದಿ ಅರ್ಚಕ ವಿಷ್ಣುಮೂರ್ತಿ ಭಟ್, ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಸಂಜೀವ ಎ., ಸಿವಿಲ್ ಎಂಜಿನಿಯರ್ ಶೈಲೇಶ ರಾವ್, ಶ್ರೀಕಾಂತ್ ರಾವ್, ಡಾ.ದೀಪಾ, ರವಿ ಪ್ರಕಾಶ್ ಶೆಟ್ಟಿಗಾರ್, ಸುರೇಶ್ ಶೆಟ್ಟಿ, ಅಶ್ವಿನಿ ರಂಗ ಕರ್ಕೇರ, ಚರಣ್ ಶೆಟ್ಟಿ ಕನ್ನರ್ಪಾಡಿ, ರಮೇಶ್ ಶೆಟ್ಟಿಗಾರ್, ಉಮೇಶ್ ಶೆಟ್ಟಿಗಾರ್ ನಾಯರ್ ಕೆರೆ, ಸತೀಶ್ ಬೀಡು ನಾಯರ್ ಕೆರೆ, ಪ್ರವೀಣ್ ಭಂಡಾರಿ ಬಲಾಯಿಪಾದೆ, ಅಶೋಕ್ ಆಚಾರ್ಯ ಕಪ್ಪೆಟ್ಟು, ಸತೀಶ್ ಶೇರಿಗಾರ್ ಕಿನ್ನಿಮುಲ್ಕಿ, ನವೀನ್ ಶೆಟ್ಟಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ ಇದ್ದರು. ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಮುರಳಿ ಭಟ್ ನಿರೂಪಿಸಿದರು.

ಸಚಿವ ಲಾಡ್ ಭೇಟಿ: ಕಿನ್ನಿಮೂಲ್ಕಿ ಗಣೇಶೋತ್ಸವಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಿದರು. ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅವರು ಸಚಿವ ಸಂತೋಷ್ ಲಾಡ್ ಅವರನ್ನು ಸ್ವಾಗತಿಸಿ ಗೌರವಿಸಿದರು. ನಂತರ ಗಣೇಶೋತ್ಸವದ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವರು ಕೆಲಕಾಲ ವೀಕ್ಷಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಅಮೃತಾ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.