ಉಡುಪಿ: ಮಲಬಾರ್ ಗೋಲ್ಡ್ ಡೈಮಂಡ್ಸ್ ನವೀಕೃತ ಶೋರೂಂ ಉದ್ಘಾಟನೆ

| Published : Dec 29 2024, 01:20 AM IST

ಸಾರಾಂಶ

ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ನವೀಕೃತ, ಸುಸಜ್ಜಿತ ಮತ್ತು ವಿಶಾಲವಾದ ಉಡುಪಿ ಶೋರೂಂ ಅನ್ನು ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ನವೀಕೃತ, ಸುಸಜ್ಜಿತ ಮತ್ತು ವಿಶಾಲವಾದ ಉಡುಪಿ ಶೋರೂಂ ಅನ್ನು ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಮಲಬಾರ್ ಗೋಲ್ಡ್ ಸಂಸ್ಥೆಯು ಜಗತ್ತಿನ 11 ದೇಶಗಳಲ್ಲಿ 375 ಶೋರೂಂಗಳನ್ನು ಹೊಂದಿದ್ದು, ವಾರ್ಷಿಕ 51 ಸಾವಿರ ಕೋಟಿ ರು. ವ್ಯವಹಾರ ಮಾಡುತ್ತಿದೆ. ಈ ರೀತಿಯ ವ್ಯವಹಾರ ಮಾಡುವ ಇನ್ನೊಂದು ಸಂಸ್ಥೆ ನಮ್ಮಲ್ಲಿ ಇಲ್ಲ. ಆ ಮಟ್ಟಕ್ಕೆ ಮಲಬಾರ್ ಗೋಲ್ಡ್ ಸಂಸ್ಥೆಯು ಬೆಳೆದು ನಿಂತಿದೆ ಎಂದು ಶ್ಲಾಘಿಸಿದರು.

ಸಂಸ್ಥೆಯು ವ್ಯವಹಾರದ ಜೊತೆ ಬಡವರ ನೆರವು ನೀಡುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ. ಈ ನವೀಕೃತ ಶೋರೂಂ ಗ್ರಾಹಕರಿಗೆ ಇನ್ನಷ್ಟು ಉತ್ತಮ ರೀತಿಯ ಸೇವೆಯನ್ನು ನೀಡುವಂತಾಗಲಿ. ಈ ಸಂಸ್ಥೆಯು ಉತ್ತಮ ಅಭಿವೃದ್ಧಿ ಕಾಣಲಿ ಎಂದು ಅವರು ಶುಭ ಹಾರೈಸಿದರು.ಉಡುಪಿ ಶೋರೂಂ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ 2013ರಲ್ಲಿ ಉಡುಪಿಯಲ್ಲಿ ಶಾಖೆ ಆರಂಭಿಸಿದ್ದು, 2018ರಲ್ಲಿ ಈ ಶೋರೂಂ ಗೀತಾಂಜಲಿ ಶೋಪರ್ ಸಿಟಿಗೆ ಸ್ಥಳಾಂತರಗೊಂಡಿತು. ಇದೀಗ 5000 ಚದರಡಿ ವಿಸ್ತ್ರೀರ್ಣ ಹೊಂದಿದ್ದ ಶೋರೂಂ 7000 ಚದರಡಿಗೆ ವಿಸ್ತರಿಸಲಾಗಿದೆ. ಈ ಮೂಲಕ ಚಿನ್ನಾಭರಣಗಳ ಸಂಗ್ರಹವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.ಗ್ರಾಹಕರಾದ ಡಾ.ಚರಿಷ್ಮಾ ಶೆಟ್ಟಿ ಅವರು ಮೈನ್ ಡೈಮಂಡ್, ವಿದ್ಯಾ ಸರಸ್ವತಿ ಹಾಗೂ ಮಾಲಿನಿ ನಾಗೇಶ್ ಅವರು ಡಿವೈನ್ ಹೆರಿಟೇಜ್ ಜ್ಯುವೆಲ್ಲರಿ, ಎಡ್ನಾ ಜತ್ತನ್ನ ಹಾಗೂ ಶಶಿ ಲೋರಯ್ಯ, ರೂಪಾ ಪ್ರಮೋದ್ ಹೆಗ್ಡೆ ಅವರು ಎರಾ ಅನ್ಕಟ್ ಡೈಮಂಡ್ಸ್, ಪಲ್ಲವಿ ಪುರುಷೋತ್ತಮ್ ಅವರು ಪ್ರೆಶಿಯಾ ಜೆಮ್ಸ್ ಸ್ಟೋನ್, ನಜ್ಮಾ ನಝೀರ್ ಅವರು ಎಥ್ನಿಕ್ ಹ್ಯಾಂಡ್ಕ್ರಾಫ್ಟೆಡ್ ಡಿಸೈನ್ಸ್, ಇಂದಿರಾ ಜೀತೇಂದ್ರ ಶೆಟ್ಟಿ ಅವರು ಬೆಳ್ಳಿಯ ರಾಮನ ಮೂರ್ತಿಯನ್ನು ಖರೀದಿಸಿದ್ದು, ಇವುಗಳನ್ನು ಮುಖ್ಯ ಅತಿಥಿಗಳು ಗ್ರಾಹಕರಿಗೆ ಹಸ್ತಾಂತರಿಸಿದರು.ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲಕ ಪುರುಷೋತ್ತಮ ಶೆಟ್ಟಿ, ಗೀತಾಂಜಲಿ ಸಿಲ್ಕ್ಸ್‌ನ ಮಾಲಕ ಸಂತೋಷ್ ವಾಗ್ಳೆ ಶುಭ ಹಾರೈಸಿದರು. ಮಲಬಾರ್ ಗೋಲ್ಡ್ ಡೈಮಂಡ್ಸ್‌ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು, ವಲಯ ಮುಖ್ಯಸ್ಥ ಸರ್ಫುದ್ದೀನ್, ಮಂಗಳೂರು ಶೋರೂಂ ಮುಖ್ಯಸ್ಥ ಶರಶ್ಚಂದ್ರ, ಕರ್ನಾಟಕ ಮಾರುಕಟ್ಟೆ ಮುಖ್ಯಸ್ಥ ಹುಝೈಲ್ ಅಹ್ಮದ್ ಭಾಗವಹಿಸಿದ್ದರು. ನಯನಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.