ಸಾರಾಂಶ
ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರರು, ಈಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಪುರುಷರ ಪ್ರತ್ಯೇಕ ವಿಭಾಗವನ್ನು ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರರು, ಈಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಪುರುಷರ ಪ್ರತ್ಯೇಕ ವಿಭಾಗವನ್ನು ಆರಂಭಿಸಿದ್ದಾರೆ.ಈ ಬಗ್ಗೆ ಸಂಸ್ಥೆಯ ಪಾಲುದಾರರಾದ ರಾಮಕೃಷ್ಣ ನಾಯಕ್ ಮತ್ತು ಸಹೋದರರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳ ಪ್ರತ್ಯೇಕ ಮಹಡಿಗಳನ್ನು ಹೊಂದಿದೆ. ಈಗ ಒಂದನೇ ಮಹಡಿಯಲ್ಲಿ ಪುರುಷರ ಸ್ವದೇಶಿ ಮತ್ತು ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್‌ಗಳ ಮಳಿಗೆಯನ್ನು ಅ.9ರಂದು ಬೆಳಗ್ಗೆ 9.45ಕ್ಕೆ ಆರಂಭಿಸಲಾಗುತ್ತಿದೆ. ಗ್ರಾಹಕರ ಪ್ರೋತ್ಸಾಹದಿಂದಲೇ ತಮ್ಮ ವ್ಯವಹಾರವು ಈ ಮಟ್ಟಕ್ಕೆ ಬೆಳೆದಿದೆ. ಆದ್ದರಿಂದ ಗ್ರಾಹಕರೇ ನಮ್ಮ ದೇವರು ಎಂಬ ಪರಿಕಲ್ಪನೆಯೊಂದಿಗೆ ಈ ನೂತನ ಪುರುಷರ ವಿಭಾಗವನ್ನು ಉದ್ಘಾಟಿಸಲಾಗುತ್ತದೆ ಎಂದರು.ಈ ಮಹಡಿಯಲ್ಲಿ ಮದುವೆ, ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ಪಾರಂಪರಿಕ ಮತ್ತು ಆಧುನಿಕ ಶೈಲಿಯ ಬಟ್ಟೆಗಳು, ಆಫೀಸ್ ವೇರ್, ಡೈಲಿ ವೇರ್, ಕ್ಯಾಶುವಲ್ ವೇರ್, ಪಾರ್ಟಿ ವೇರ್ ಇತ್ಯಾದಿಗಳ ವಿಫುಲ ಸಂಗ್ರಹವನ್ನಿಡಲಾಗಿದೆ. ಅಲ್ಲದೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸೂಟಿಂಗ್ಸ್ - ಶರ್ಟಿಂಗ್ಸ್ ಜೊತೆಗೆ ಒಳಉಡುಪುಗಳು ಲಭ್ಯವಿದೆ ಎಂದವರು ತಿಳಿಸಿದರು.
ಸುಮಾರು 15 ಸಾವಿರ ಚದರಡಿ ವಿಸ್ತೀರ್ಣದ ಈ ಮಹಡಿಯಲ್ಲಿ ದೇಶಿ ಮತ್ತು ವಿದೇಶಿ ಬ್ರ್ಯಾಂಡ್‌ಗಳ ಪ್ರತ್ಯೇಕ ವಿಭಾಗಗಳಿವೆ. ಅಲ್ಲದೇ ಪೀಟರ್ ಇಂಗ್ಲೆಂಡ್, ಲಿನನ್ ಕ್ಲಬ್, ಕಿಲ್ಲರ್, ಫ್ಲೈಯಿಂಗ್ ಮೆಶಿನ್, ಅಲನ್ ಸೂಲಿ, ವ್ಯಾನ್ ಹುಸೇನ್, ಲೂಯಿಸ್ ಪಿಲಿಪ್, ಜಾನ್ ಪ್ಲೇಯರ್, ಲೆವಿಸ್ ಇತ್ಯಾದಿ ಬ್ರ್ಯಾಂಡ್‌ಗಳ ಫಾರ್ಮಲ್, ಜೀನ್ಸ್ ಬಟ್ಟೆಗಳು ಲಭ್ಯ ಇವೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ನಾಯಕ್, ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಸಂತೋಷ್ ನಾಯಕ್ ಮತ್ತು ಹರೀಶ್ ನಾಯಕ್ ಉಪಸ್ಥಿತರಿದ್ದರು.