ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೇರಿಯಲ್ ಕಾಲೇಜಿನ ಇಂಗ್ಲಿಷ್ ವಿಭಾಗ, ಇಂಗ್ಲಿಷ್ ವೇದಿಕೆ ಮತ್ತು ಐಕ್ಯೂಎಸಿ ವತಿಯಿಂದ ಮಿನಿ ಪ್ರಾಜೆಕ್ಟ್ ತಯಾರಿ ಹಾಗೂ ಸಂಶೋಧನಾ ವಿಧಾನ ಕುರಿತು ಕಾರ್ಯಾಗಾರ ನಡೆಯಿತು.
ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಸಂಶೋಧನಾ ವಿಷಯದ ಆಯ್ಕೆ, ಸಂಶೋಧನಾ ಪ್ರಶ್ನೆಗಳನ್ನು ರೂಪಿಸುವುದು, ಉದ್ದೇಶಗಳನ್ನು ರೂಪಿಸುವುದು, ರಿವ್ಯೂ ಆಫ್ ಲಿಟರೇಚರ್, ಸೂಕ್ತವಾದ ವಿಧಾನವನ್ನು ಆರಿಸುವುದು, ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ, ದಾಖಲಾತಿ, ಉಲ್ಲೇಖದ ಅಭ್ಯಾಸಗಳು ಮತ್ತು ಸಂಶೋಧನೆಗಳ ಸಂಕಲನ ಸೇರಿದಂತೆ ಮಿನಿ ಯೋಜನೆಯ ಅಗತ್ಯ ಅಂಶಗಳ ಉಪಯುಕ್ತ ಮಾಹಿತಿಗಳೊಂದಿಗೆ ಕಾರ್ಯಾಗಾರ ನಡೆಸಿಕೊಟ್ಟರು.ಕಾಲೇಜಿನ ಅಂತಿಮ ವರ್ಷದ ಬಿ.ಎ, ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರ ಆಯೋಜಿಸಲಾಯಿತು. ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು, ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಅಶ್ವಿನಿ ಸಿ. ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ, ನಿತಿನ್ ಪಿರೇರಾ ವಂದಿಸಿದರು. ಅಮ್ರ ಖಾಜಿ ನಿರೂಪಿಸಿದರು.ಉಡುಪಿ ಎಂಜಿಎಂ ಕಾಲೇಜು: ಸಂಶೋಧನಾ ವಿಧಾನ ಕಾರ್ಯಾಗಾರ
ಇಲ್ಲಿನ ಮಹಾತ್ಮ ಗಾಂಧಿ ಮೆಮೇರಿಯಲ್ ಕಾಲೇಜಿನ ಇಂಗ್ಲಿಷ್ ವಿಭಾಗ, ಇಂಗ್ಲಿಷ್ ವೇದಿಕೆ ಮತ್ತು ಐಕ್ಯೂಎಸಿ ವತಿಯಿಂದ ಮಿನಿ ಪ್ರಾಜೆಕ್ಟ್ ತಯಾರಿ ಹಾಗೂ ಸಂಶೋಧನಾ ವಿಧಾನ ಕುರಿತು ಕಾರ್ಯಾಗಾರ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.