ಸಾರಾಂಶ
ಎಂಜಿಎಂ ಸಂಧ್ಯಾ ಕಾಲೇಜಿನ ಭಾರತೀಯ ರೆಡ್‌ಕ್ರಾಸ್‌ನ ಯುವ ರೆಡ್‌ಕ್ರಾಸ್ ಘಟಕದ ವಿಶೇಷ ಶಿಬಿರವು ಇತ್ತೀಚೆಗೆ ನೀಲಾವರದ ಗೋವರ್ಧನ ಗೋಶಾಲೆಯಲ್ಲಿ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಎಂಜಿಎಂ ಸಂಧ್ಯಾ ಕಾಲೇಜಿನ ಭಾರತೀಯ ರೆಡ್‌ಕ್ರಾಸ್‌ನ ಯುವ ರೆಡ್‌ಕ್ರಾಸ್ ಘಟಕದ ವಿಶೇಷ ಶಿಬಿರವು ಇತ್ತೀಚೆಗೆ ನೀಲಾವರದ ಗೋವರ್ಧನ ಗೋಶಾಲೆಯಲ್ಲಿ ಸಂಪನ್ನಗೊಂಡಿತು.ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ರೆಡ್‌ಕ್ರಾಸ್‌ನ ಮೌಲ್ಯಗಳಾದ ಮಾನವೀಯತೆ, ಐಕ್ಯತೆ, ಸ್ವಾತಂತ್ರ್ಯ, ಸಹಬಾಳ್ವೆ, ಏಕತೆಗಳ ಮಹತ್ವವನ್ನು ವಿವರಿಸಿದರು. ಶಿಬಿರವು ಸ್ವಯಂ ಸೇವಕರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಬೆಳೆಸಿದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೆಡ್‌ಕ್ರಾಸ್ ಉಡುಪಿಯ ಅಧ್ಯಕ್ಷ ಬಸರೂರು ರಾಜೀವ ಶೆಟ್ಟಿ ಮಾತಾನಾಡಿ, ಸುಮಾರು ೧೬೦ ವರ್ಷಗಳ ಇತಿಹಾಸವಿರುವ ರೆಡ್‌ಕ್ರಾಸ್ ಜಗತ್ತಿನಾದ್ಯಂತ ಮಾನವೀಯ ಸೇವೆಗೆ ಹೆಸರಾಗಿದೆ. ಇದರ ಪರಿಚಯವನ್ನು ಸ್ವಯಂ ಸೇವಕರಿಗೆ ಮಾಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್ ವಹಿಸಿದ್ದರು. ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ದೀಪಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೆಡ್‌ಕ್ರಾಸ್ ಸ್ವಯಂ ಸೇವಕಿಯರು ಪ್ರಾರ್ಥಿಸಿದರು. ಸ್ವಯಂ ಸೇವಕ ಶ್ರೀ ರಾಮ ಸ್ವಾಗತಿಸಿದರು. ಸ್ವಯಂ ಸೇವಕಿ ಐಕ್ಯ ವಂದಿಸಿದರು. ಸ್ವಯಂ ಸೇವಕ ಭಾರ್ಗವ ಕಾರ್ಯಕ್ರಮ ನಿರ್ವಹಿಸಿದರು.