ಸಾರಾಂಶ
ಭಜನೆ, ಯಕ್ಷಗಾನ, ಹರಿಕಥೆ, ನೃತ್ಯ ರೂಪಕ, ಕುಣಿತ ಭಜನೆ, ಲಘುಶಾಸ್ತ್ರೀಯ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಜ್ಯೋತಿ ಬೆಳಗಿಸಿ ನರಸಿಂಹ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀನೀಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ನರಸಿಂಹ ಜಯಂತಿಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಉಡುಪಿಯ ರಾಜಾಂಗಣದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಭಜನೆ, ಯಕ್ಷಗಾನ, ಹರಿಕಥೆ, ನೃತ್ಯ ರೂಪಕ, ಕುಣಿತ ಭಜನೆ, ಲಘುಶಾಸ್ತ್ರೀಯ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಮಠದ ದಿವಾನ ನಾಗರಾಜ ಆಚಾರ್ಯ ನರಸಿಂಹ ಜಯಂತಿ ಆಚರಣೆಯ ಮಹತ್ವ ವಿವರಿಸಿ ಶುಭಾಸಂಸನೆಗೈದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಹಾಗೂ ಭಜನಾ ತರಬೇತುದಾರೆ ಉಷಾ ಹೆಬ್ಬಾರ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ್ ಮಣಿಪಾಲ, ಮಠದ ಪ್ರಮುಖರಾದ ರಘುಪತಿ ರಾವ್, ಕಲಾವಿದರಾದ ರಾಮಕೃಷ್ಣ ಕೊಡಂಚ, ಕಾರ್ತಿಕ್ ಇನ್ನಂಜೆ, ಮುರಳಿ, ಕಾವ್ಯ ಹೆಬ್ಬಾರ್, ಕೌಶಿಕ್ ಹೆಬ್ಬಾರ್, ನಿತ್ಯಾನಂದ ನಾಯಕ್ ಹಾಗೂ ಭಜನಾ ಮಂಡಳಿಗಳ ಸದಸ್ಯರು ಇದ್ದರು.