ಸಾರಾಂಶ
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ತನ್ನ ದತ್ತು ಗ್ರಾಮ ಅಲೆವೂರಿನಲ್ಲಿ ೨೦೨೪-೨೫ರ ವಾರ್ಷಿಕ ಶಿಬಿರವನ್ನು ಫೆ.7ರಿಂದ 13ರ ವರೆಗೆ ಅಲೆವೂರಿನ ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ತನ್ನ ದತ್ತು ಗ್ರಾಮ ಅಲೆವೂರಿನಲ್ಲಿ ೨೦೨೪-೨೫ರ ವಾರ್ಷಿಕ ಶಿಬಿರವನ್ನು ಫೆ.7ರಿಂದ 13ರ ವರೆಗೆ ಅಲೆವೂರಿನ ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದೆ.ಈ ಶಿಬಿರವನ್ನು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ರಮೇಶ್ ಟಿ.ಎಸ್. ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಶಿಬಿರದ ಮುಖ್ಯ ಅಥಿತಿಗಳಾಗಿ ಪಿಪಿಸಿಯ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ ಅವರು ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಸ್ಥಳೀಯ ಗಣ್ಯರಾದ ವಾರಿಜ ಶೆಟ್ಟಿ, ಶಶಿಪ್ರಭ ಶೆಟ್ಟಿ, ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪಲತಾ ಬಿ.ಎಸ್. ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ. ವಿನಯ ಕುಮಾರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ನಾಗರಾಜ ಜಿ.ಪಿ., ಸುಪರ್ಣ, ಸಹ ಯೋಜನಾಧಿಕಾರಿಗಳಾದ ಸ್ವಾತಿ ಪಿ.ಕೆ., ಮಹೇಶ್ ಶೆಟ್ಟಿ, ಎನ್‌ಎಸ್‌ಎಸ್ ತಂಡದ ನಾಯಕರು, ಶಿಬಿರಾರ್ಥಿಗಳು, ಸುಬೋಧಿನೀ ಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.