ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಪೇಜಾವರ ಮಠಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 39ನೇ ಚಾತುರ್ಮಾಸ್ಯ ವ್ರತ ಸಂಪನ್ನಗೊಂಡಿತು.

ಉಡುಪಿ: ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಪೇಜಾವರ ಮಠಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 39ನೇ ಚಾತುರ್ಮಾಸ್ಯ ವ್ರತ ಸಂಪನ್ನಗೊಂಡಿತು.

ಅಧ್ಯಕ್ಷತೆ ವಹಿಸಿದ್ದ ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರು ಶ್ರೀಗಳನ್ನು ಈಶಾನ್ಯದ ರಾಜ್ಯಗಳಲ್ಲಿ ಮಠದ ಸೇವಾಕಾರ್ಯಗಳನ್ನು ಆರಂಭಿಸಬೇಕು ಎಂದು ಆಹ್ವಾನಿಸಿದರು.

ಮುಖ್ಯ ಅತಿಥಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಸ್ವಾಮೀಜಿಯವರು ನೀಡಿದ ಸಂತ ಸಂಗಮದ ನಿರ್ಣಯವನ್ನು ಸ್ವೀಕರಿಸಿ, ಅತ್ಯಂತ ಉತ್ತಮವಾದ ಸೂಚನೆಗಳನ್ನು ನೀಡಿದ್ದೀರಿ, ನಿಶ್ಚಿತವಾಗಿ ದೆಹಲಿ ಸರ್ಕಾರ ಈ ಬಗ್ಗೆ ಕ್ರಿಯಾತ್ಮಕ ಹೆಜ್ಜೆ ಇಡಲಿದೆ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರರಾಜಧಾನಿಯಲ್ಲಿ ತಮ್ಮ ಐತಿಹಾಸಿಕ ಚಾತುರ್ಮಾಸ ವ್ರತವನ್ನು ನಡೆಸಿದ ಸ್ವಾಮೀಜಿಯವರಿಗೆ ಪುಷ್ಪಾಭಿಷೇಕದ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಅಲೋಕ್ ಕುಮಾರ್ ಎರಡು ತಿಂಗಳ ಕಾರ್ಯಕ್ರಮದ ಅವಲೋಕನ ವರದಿ ನೀಡಿದರು. ಶಾಸಕ ಅನಿಲ್ ಶರ್ಮಾ ಕೈಲಾಶ್ ಗೆಹ್ಲೋಟ್, ಕಾರ್ಪೋರೇಟರ್ ಇಂದ್ರಜಿತ್ ಸೆರಾವತ್, ಸಮಿತಿ ಪ್ರ. ಕಾರ್ಯದರ್ಶಿ ಡಾ ವರಖೇಡಿ ಶ್ರೀನಿವಾಸ್. ಗುರುಕುಲ ಪ್ರಾಚಾರ್ಯ ಡಾ ವಿಠೋಬಾಚಾರ್ಯ ಉಪಸ್ಥಿತರಿದ್ದರು. ಸವಿತಾ ಕಾರ್ಯಕ್ರಮ‌ ನಿರೂಪಿಸಿದರು ವಾಸುದೇವ ಭಟ್ ಪೆರಂಪಳ್ಳಿ ಸಂಯೋಜನೆಯ ನೇತೃತ್ವ ವಹಿಸಿದರು. ರಾಕೇಶ್ ಗೌರ್, ಕೃಷ್ಣ ಭಟ್ ಶ್ರೀನಿಧಿ ಜೋಶಿ, ಅಶ್ವಿನ್ ಕುಮಾರ್ ನೀರಜ್ ಟ್ರೆಗಾನ್, ದೀಪಕ್ ದೇವೇಂದರ್, ನವನೀತ್ ಕಠಾನ್ ಸಹಕರಿಸಿದರು.