ಇಲ್ಲಿನ ಭಾವನಾ ಫೌಂಡೇಶನ್ ವತಿಯಿಂದ ಭಾಸ ಗ್ಯಾಲರಿ, ಸ್ಟುಡಿಯೊ ಹಾವಂಜೆ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಸಹಯೋಗದಲ್ಲಿ ‘ಜನಪದ ಕಲೆಗಳ ಕಾರ್ಯಾಗಾರ’ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ನಡೆಯಿತು.

ಉಡುಪಿ: ಇಲ್ಲಿನ ಭಾವನಾ ಫೌಂಡೇಶನ್ ವತಿಯಿಂದ ಭಾಸ ಗ್ಯಾಲರಿ, ಸ್ಟುಡಿಯೊ ಹಾವಂಜೆ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಸಹಯೋಗದಲ್ಲಿ ‘ಜನಪದ ಕಲೆಗಳ ಕಾರ್ಯಾಗಾರ’ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ವಿವಿಧ ಪ್ರಾಂತ್ಯದ ಭಾರತೀಯ ಜನಪದಕಲೆಗಳನ್ನು ಉಡುಪಿಯ ಆಸಕ್ತರಿಗೆ ಪರಿಚಯಿಸುತ್ತಿರುವುದು ಸಂತೋಷದಾಯಕ ವಿಚಾರ. ಪಿಥೋರ ಜನಪದ ಕಲೆಯನ್ನು ನಾನೇ ಮೊದಲಬಾರಿಗೆ ಕೇಳುತ್ತಿರುವೆ. ಇಂತಹ ಕಲೆಗಳು ದೇಶವ್ಯಾಪಿಯಾಗಿ ಪ್ರಸಿದ್ಧಿಯಾಗಲಿ ಎಂದರು.

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೇಂದ್ರದ ಸಹ ಸಹಸಂಶೋಧಕ ಡಾ. ಅರುಣ್ ಕುಮಾರ್, ಫೌಂಡೇಶನ್ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಯೋಜಕ ಡಾ. ಜನಾರ್ದನ ಹಾವಂಜೆ ಜನಪದ ಕಲೆಗಳ ಸರಣಿಯಲ್ಲಿ 20 ನೇ ಕಾರ್ಯಾಗಾರ ಇದಾಗಿದ್ದು, ಈ ಮೂಲಕ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಪರಿಚಯಿಸುವುದರ ಜೊತೆಗೆ ಅವುಗಳ ನೈಸರ್ಗಿಕ, ತಾಂತ್ರಿಕತೆ ವಿನ್ಯಾಸ ರೂಪಗಳನ್ನು ಕಲಿಯುವುದಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದರು.ಪಿಥೋರ ಚಿತ್ರಕಲೆಯನ್ನು ಗುಜರಾತಿನ ರಥ್ವ ಜನಾಂಗದ ನಾರಾನ್ ಬಾಯಿ ಹರಿಬಾಯಿ ರಥ್ವ ಕಲಿಸಿಕೊಟ್ಟರು. ಡಾ. ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.