ಸಾರಾಂಶ
ಶಿರಸಿಯ ಸಾಮಾಜಿಕ ಕಾರ್ಯಕರ್ತ ಪಯ್ಯು ಚೌಟಿ ಅವರ ಫಾರ್ಚುನರ್ ಕಾರನ್ನು ಉಡುಪಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಉಡುಪಿಯ ರಶೀದ್ ಎಂಬುವವರಿಗೆ ಮೋಸ ಮಾಡಿ ಫಾರ್ಚುನರ್ ಕಾರನ್ನು ಪಯ್ಯು ಚೌಟಿ ತನ್ನ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಶಿರಸಿಯ ಸಾಮಾಜಿಕ ಕಾರ್ಯಕರ್ತ ಪಯ್ಯು ಚೌಟಿ ಅವರ ಫಾರ್ಚುನರ್ ಕಾರನ್ನು ಉಡುಪಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಉಡುಪಿಯ ರಶೀದ್ ಎಂಬುವವರಿಗೆ ಮೋಸ ಮಾಡಿ ಫಾರ್ಚುನರ್ ಕಾರನ್ನು ಪಯ್ಯು ಚೌಟಿ ತನ್ನ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಕುರಿತಂತೆ ರಶೀದ್ ಉಡುಪಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಉಡುಪಿ ನಗರ ಠಾಣಾ ಪೊಲೀಸರು ಶನಿವಾರ ಸಂಜೆ ಬಂದು ಶಿರಸಿ ಪೊಲೀಸರ ಸಹಕಾರದಲ್ಲಿ ಕಾರನ್ನು ವಶಕ್ಕೆ ಪಡೆದು ವಾಪಸ್ ಉಡುಪಿಗೆ ಒಯ್ದಿದ್ದಾರೆ.;Resize=(128,128))
;Resize=(128,128))
;Resize=(128,128))