ಸಾರಾಂಶ
ಜಿಲ್ಲೆಯ ಆಯ್ದ 71 ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಉತ್ತಮ ಆರೋಗ್ಯ ಹೊಂದುವುದಕ್ಕಾಗಿ ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡಗೊಳಿಸಲು 30 ದಿನಗಳ ಉಚಿತ ‘ನವಚೇತನ ಶಿಬಿರ’ನ್ನು ಆತ್ರಾಡಿಯ ಪರೀಕದಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಜು.1ರಿಂದ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯ ಆಯ್ದ 71 ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಉತ್ತಮ ಆರೋಗ್ಯ ಹೊಂದುವುದಕ್ಕಾಗಿ ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡಗೊಳಿಸಲು 30 ದಿನಗಳ ಉಚಿತ ‘ನವಚೇತನ ಶಿಬಿರ’ನ್ನು ಆತ್ರಾಡಿಯ ಪರೀಕದಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಜು.1ರಿಂದ ನಡೆಸಲಾಗುತ್ತಿದೆ.ಈಗಾಗಲೇ ಹತ್ತು ದಿನಗಳ ತರಬೇತಿ ಮುಗಿದಿದ್ದು, ಪ್ರತಿದಿನ ಬೆಳಿಗ್ಗೆ ಸೌಖ್ಯವನ ಇದರ ಯೋಗ ತರಬೇತುದಾರದಿಂದ ಒಂದು ಗಂಟೆ ಡೈನಾಮಿಕ್ ಯೋಗ ತರಬೇತಿ ನೀಡಲಾಗುತ್ತಿದೆ. ನಂತರ ಒಂದು ಗಂಟೆಯ ತರಬೇತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ ಶಿಕ್ಷಕರಿಂದ ಭೌತಿಕ ವ್ಯಾಯಾಮವನ್ನು ಮಾಡಿಸಲಾಗುತ್ತಿದೆ.
ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಉಮೇಶ್ ಮಟ್ಟು ಇವರಿಂದ ಫಿಟ್ನೆಸ್ ತರಬೇತಿಯನ್ನು, ಸ್ವಾಯ್ ಡಾನ್ಸ್ ಅಕಾಡೆಮಿಯ ಸಿಂಚನ ಪ್ರಕಾಶ್ ಅವರಿಂದ ಝೂಂಬಾ ತರಗತಿಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ವಿವಿಧ ಕ್ಷೇತ್ರದ ಪರಿಣಿತರಿಂದ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಾಗಿದೆ. ಜೊತೆಗೆ ಪ್ರತಿದಿನ ಸಂಜೆ ಒಂದು ಗಂಟೆ ನೇಚರ್ ವಾಕ್ ಮಾಡಲಾಗುತ್ತಿದೆ. ಈ ಸಿಬ್ಬಂದಿಯಲ್ಲಿ ಅವಶ್ಯಕತೆ ಇದ್ದವರಿಗೆ ಫಿಶಿಯೋಥೆರಪಿ ಹಾಗೂ ಸ್ಟೀಮ್ ಬಾತ್ ಕೂಡ ಮಾಡಿಸಲಾಗುತ್ತಿದೆ. ಎಲ್ಲರಿಗೂ ಪ್ರತಿದಿನ ಪತ್ಯದ ಆಹಾರ (ಡಯಟ್ ಫುಡ್) ಮಾತ್ರ ನೀಡಲಾಗುರುತ್ತದೆ.ಈ ಶಿಬಿರ ಬಹಳ ಯಶಸ್ವಿಯಾಗಿ ಹತ್ತು ದಿನಗಳನ್ನು ಪೂರೈಸಿದ್ದು, ಈಗಾಗಲೇ ಈ ಸಿಬ್ಬಂದಿಯಲ್ಲಿ ಫಲಿತಾಂಶ ವ್ಯಕ್ತವಾಗುತ್ತಿದೆ. ಇನ್ನು 20 ದಿನಗಳ ತರಬೇತಿ ನಡೆಯಬೇಕಾಗಿದೆ. ಗುರುವಾರ ಎಸ್ಪಿ ಹರಿರಾಮ್ ಶಂಕರ್ ಶಿಬಿರಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.