ಸಾರಾಂಶ
ಮಹಿಳಾ ಉದ್ಯಮಿಗಳ ಪವರ್ ಸಂಘಟನೆ ವತಿಯಿಂದ ‘ಪವರ್ ಪರ್ಬ-25’ ಫೆ.7ರಿಂದ 9ರ ವರೆಗೆ ನಗರದ ಮಿಷನ್ ಕೌಂಪೌಂಡ್‌ನ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.7ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಪಾಲ್ಗೊಳ್ಳುವರು. ಎಂಎಸ್‌ಎಂಇ ಜಂಟಿ ನಿರ್ದೇಶಕ ಕೆ.ಸಾಕ್ರಟಿಸ್ ಮಳಿಗೆಗಳನ್ನು ಉದ್ಘಾಟಿಸುವರು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಹಿಳಾ ಉದ್ಯಮಿಗಳ ಪವರ್ ಸಂಘಟನೆ ವತಿಯಿಂದ ‘ಪವರ್ ಪರ್ಬ-25’ ಫೆ.7ರಿಂದ 9ರ ವರೆಗೆ ನಗರದ ಮಿಷನ್ ಕೌಂಪೌಂಡ್‌ನ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಪಾಲ್ಗೊಳ್ಳುವರು. ಎಂಎಸ್‌ಎಂಇ ಜಂಟಿ ನಿರ್ದೇಶಕ ಕೆ.ಸಾಕ್ರಟಿಸ್ ಮಳಿಗೆಗಳನ್ನು ಉದ್ಘಾಟಿಸುವರು ಎಂದು ತಿಳಿಸಿದರು.ಕೌಶಲಾಭಿವೃದ್ಧಿ ಮಳಿಗೆಯನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸುವರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಸೇರಿದಂತೆ ಮೊದಲಾದವರು ಭಾಗವಹಿಸುವರು ಎಂದರು.ಪವರ್ ಸಂಸ್ಥೆಯು ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಒದಗಿಸಲು ಗ್ರಾಮೋತ್ಸವ ಮೊದಲಾದ ಮೇಳಗಳನ್ನೂ ಆಯೋಜಿಸಿದ್ದೇವೆ. ಪವರ್ ಪರ್ಬದಲ್ಲಿ ಆಭರಣಗಳು, ವಸ್ತ್ರ ವಿನ್ಯಾಸ, ಗೃಹಲಂಕಾರ, ಆಹಾರ, ಸಿದ್ಧ ಉಡುಪುಗಳು ಸೇರಿದಂತೆ ಇನ್ನಿತರ ವಸ್ತುಗಳು ಮಾರಾಟಗೊಳ್ಳಲಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುಗುಣಾ ಸುವರ್ಣ, ಪ್ರಿಯಾ ಎಸ್. ಕಾಮತ್, ಪುಷ್ಪಾ ಜಿ. ರಾವ್, ಸುಪ್ರಿಯಾ ಆರ್. ಕಾಮತ್ ಉಪಸ್ಥಿತರಿದ್ದರು.