ಜ. 31 ಮತ್ತು ಫೆ. 1ರಂದು ನಡೆಯುವ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ - ಆಯುಷ್ ಹಬ್ಬದ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಉಡುಪಿ: ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಜ. 31 ಮತ್ತು ಫೆ. 1ರಂದು ನಡೆಯುವ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ - ಆಯುಷ್ ಹಬ್ಬದ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎಎಫ್ಐ ಅಧ್ಯಕ್ಷ ಡಾ.ಎನ್ .ಟಿ. ಅಂಚನ್ ಪಡುಬಿದ್ರಿ ವಹಿಸಿದ್ದರು. ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷರಾದ ಡಾ. ಆಶಾ ಜ್ಯೋತಿ ರೈ ಮಾಲಾಡಿ ಅವರು ಈ ಕಾರ್ಯಕ್ರಮದ ಮೂಲ ಉದ್ದೇಶ ಹಾಗೂ ಸಂಪದ್ಭರಿತವಾದ ಆಯುಷ್ ವೈದ್ಯ ಪದ್ಧತಿಗಳ ಪ್ರಯೋಜನ ಎಲ್ಲ ವರ್ಗದ ಜನರಿಗೆ ತಲಪಿಸುವಲ್ಲಿ ಸಹಕಾರಿಯಾಗಲಿದೆ. ಎಲ್ಲರಿಗೂ ಉಚಿತ ಹಾಗೂ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದರು.ಆಯುಷ್ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ. ಸಚಿನ್ ನಡ್ಕ ಅವರು ಆಯುಷ್ ಹಬ್ಬದಲ್ಲಿ ಇರುವ ವಿವಿಧ ವೈಶಿಷ್ಟ್ಯಗಳ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಗಳ ಎಲ್ಲ ಆಯುಷ್ ಕಾಲೇಜುಗಳು ಭಾಗವಹಿಸಲಿದ್ದು, ಇದರಲ್ಲಿ ಆರೋಗ್ಯಪೂರ್ಣ ಹೃದಯಕ್ಕಾಗಿ ಆಯುಷ್, ಮಹಿಳಾ ಹಬ್ಬ, ಸಾವಯವ ಸಂತೆಯಲ್ಲಿ ಸುಮಾರು 70 ಮಳಿಗೆಗಳು ರಾಸಾಯನಿಕ ರಹಿತ ಆಹಾರ ಪದ್ಧತಿಗಳ ಮಾಹಿತಿ, ಮಾರಾಟ ಲಭ್ಯವಾಗಲಿದೆ. 10 ವರ್ಷಗಳ ಬಳಿಕ ನಡೆಯುತ್ತಿರುವ ಈ ಆಯುಷ್ ಹಬ್ಬದ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಆಯುಷ್ ಹಬ್ಬ ಕೇಂದ್ರ ಸಮಿತಿ ಪದಾಧಿಕಾರಿಗಳಾದ ಡಾ. ದೇವದಾಸ್ ಪುತ್ರನ್, ಡಾ. ಸುಭೋದ್ ಭಂಡಾರಿ, ಡಾ. ಗುರುಪ್ರಸಾದ್ ನಾವುಡ, ಡಾ. ಅಭಿಷೇಕ್, ಆಯುಷ್ ಹಬ್ಬ 2026ರ ಸಹ ಸಂಯೋಜಕ ಡಾ. ಸಂದೀಪ್ ಸನಿಲ್, ಡಾ. ಸತೀಶ್ ರಾವ್, ಜಿಲ್ಲಾ ಕಾರ್ಯದರ್ಶಿ ಡಾ. ಮನೋಜ್ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ಡಾ. ವಸಂತ್, ಕಾರ್ಕಳ ಅಧ್ಯಕ್ಷ ಡಾ. ರವೀಂದ್ರ, ಕುಂದಾಪುರ ಅಧ್ಯಕ್ಷ ಡಾ. ವಿಜಯ ನೆಗ್ಲೂರು, ಡಾ. ಲೋಕೆಶ್ ಶೆಟ್ಟಿ, ಎಲ್ಲ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ಆಯುಷ್ ವೈದ್ಯರು ಭಾಗವಹಿಸಿದ್ದರು.